ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಎನ್. ನಂದಿಕೇಶನ್‌ರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ

ಕಾಸರಗೋಡು: ರೋಟರಿ ಕಾಸರಗೋಡಿನ ಈ ವರ್ಷದ ರೋಟರಿ ನೇಶನ್ ಬಿಲ್ಡರ್ ಪ್ರಶಸ್ತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾಸರಗೋಡು ಜಿಲ್ಲಾ ಉಪನಿರ್ದೇಶಕ (ಡಿಡಿಇ) ಎನ್.ನಂದಿಕೇಶನ್ ಅವರಿಗೆ ಪ್ರದಾನ ಮಾಡಲಾಗಿದೆ. ಕಾಸರಗೋಡು ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ಸಿ.ಎ. ವಿಶಾಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.ಅಧ್ಯಕ್ಷ ಗೌತಮ ಭಕ್ತ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳರಾವ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಂದಿಕೇಶನ್, ಜಿಲ್ಲೆಯ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರಪರವಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.ಎಂ.ಕೆ.ರಾಧಾಕೃಷ್ಣನ್, ಜಂಟಿ ಕಾರ್ಯದರ್ಶಿ ನಿಹಾಲ್ ಜಾಯ್, ಕಣ್ಣೂರು ಪ್ರಾದೇಶಿಕ ವೇದಿಕೆ ಅಧ್ಯಕ್ಷ ದಿನೇಶ್ ಎಂ.ಟಿ., ಡಾ.ನಾರಾಯಣ ನಾಯ್ಕ್ ಮಾತನಾಡಿದರು.
ಶಿಕ್ಷಕ, ಎಇಒ, ಡಿಇಒ ಮತ್ತು ಡಿಡಿಇ ಹುದ್ದೆಯಲ್ಲಿ ನಂದಿಕೇಶನ್ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.

RELATED NEWS

You cannot copy contents of this page