ಜಿಲ್ಲೆಯಲ್ಲಿ ನೈಪುಣ್ಯ ಅಭಿವೃದ್ಧಿ ಕೇಂದ್ರ ಸಿದ್ಧಪಡಿಸಲು ಲಿಂಕ್ ಗ್ರೂಪ್

ಕಾಸರಗೋಡು: ಜಿಲ್ಲಾ ನೈಪುಣ್ಯ ಅಭಿವೃದ್ಧಿ ಕೇಂದ್ರವಾಗಿ ಬದಲಿಸಲಿರುವ ಸಾಧ್ಯತೆಗಳ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿಯಾಗಿ ವಿದೇಶ ಠೇವಣಿ ಉದ್ಯಮಿಗಳ ಲಿಂಕ್ ಗ್ರೂಪ್‌ನೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲಾಯಿತು. ಉದ್ಯೋಗಾರ್ಥಿಗಳ ಕೈಗಳಿಗೆ ಕೆಲಸ ತಲುಪಿಸುವುದು ಎಂಬ ಉದ್ದೇಶದೊಂದಿಗೆ, ಗ್ರೂಪ್, ರಾಜ್ಯ, ಜಿಲ್ಲಾ, ಗ್ರಾಮ ಮಟ್ಟದಲ್ಲಿರುವ ಸರಕಾರಿ ವ್ಯವಸ್ಥೆಗಳ ಸಹಾಯದೊಂದಿಗೆ ನೈಪುಣ್ಯ ಅಭಿವೃದ್ಧಿ ಕೇಂದ್ರ ನಿರ್ಮಿಸಲಾಗುವುದು. ಜಿಲ್ಲೆಯ ಶಿಕ್ಷಣ ರಂಗ ಉತ್ತಮಪಡಿಸಿ ಶಿಕ್ಷಣ ಅರ್ಹತೆ ಉಳ್ಳವರಿಗೆ ಉದ್ಯೋಗ ಕೇಂದ್ರಗಳಲ್ಲಿ ಅಗತ್ಯವಾದ ತಜ್ಞ ತರಬೇತಿ ನೀಡಿ ಪ್ರಾಪ್ತರನ್ನಾಗಿ ಮಾಡುವುದು ನೈಪುಣ್ಯ ಅಭಿವೃದ್ಧಿ ಕೇಂದ್ರದಿಂದ ಉದ್ದೇಶಿಸಲಾಗಿದೆ.

ಜಿಲ್ಲೆಯಲ್ಲಿ ಕೆಲಸ ಹುಡುಕಾಡುವವರಿಗೆ ಸ್ವ-ಉದ್ಯೋಗದೊಂದಿಗೆ ಬಹುರಾಷ್ಟ್ರ ಕಂಪೆನಿಗಳಲ್ಲಿ ಕೆಲಸ ಲಭಿಸುವಂತೆ ಮಾಡಲು ಈ ಮೂಲಕ ಸಾಧ್ಯವಾಗಬಹುದೆಂದು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿಯಾಗಿ ಜ್ಯಾರಿಗೊಳಿಸಿದ ಠೇವಣಿ ಸಂಗ್ರಹದ ಮೂಲಕ ಜಿಲ್ಲೆಯ ಮೊದಲ ಠೇವಣಿ ನಿಕ್ಷೇಪ ಕಂಪೆನಿಯಾಗಿ ಲಿಂಕ್ ಗ್ರೂಪ್ ಮುಂದೆ ಬಂದಿರುವುದು ದೊಡ್ಡ ಸಾಧನೆ ಎಂದು ಅಭಿಪ್ರಾಯಪಡಲಾಗಿದೆ. ಗ್ರೂಪ್ ಇದುವರೆಗೆ ೧೨ ಕೋಟಿ ರೂ.ಗಿಂತಲೂ ಹೆಚ್ಚು ಠೇವಣಿ ಇರಿಸಿದೆ. ಪ್ರಸ್ತುತ ಜಿಲ್ಲೆಯಲ್ಲಿ ೫೦ಕ್ಕೂ ಅಧಿಕ ಉದ್ಯೋಗಾರ್ಥಿಗಳು ನೇರವಾಗಿ ಕಾಸರಗೋಡು ಹಾಗೂ ಕೊಚ್ಚಿಯಲ್ಲಿರುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಂಗವಾಗಿ ಲಿಂಕ್ ಅಕಾಡೆಮಿ ೨೦೨೨ ಜೂನ್‌ನಿಂದ ಅಸಾಪ್ ಕೇರಳದ ಚಟುವಟಿಕಾ ಸಹಭಾಗಿಯಾಗಿ ವಿವಿಧ ರೀತಿಯಲ್ಲಿರುವ ನೈಪುಣ್ಯ ಅಭಿವೃದ್ಧಿ ತರಬೇತಿ ನೀಡುತ್ತಿದೆ.

You cannot copy contents of this page