ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆದುರಾದ ತನಿಖೆ ತೀವ್ರಗೊಳಿಸುವುದಾಗಿ ಜಿಲ್ಲಾಧಿಕಾರಿ

ಕಾಸರಗೋಡು: ಸರಕಾರಿ ಇಲಾಖೆಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದಕ್ಕೂ, ಸಾರ್ವಜನಿಕರಿಗೆ ಸರಕಾರದಿಂದ ದಕ್ಷತೆಯ ಸೇವೆ ಲಭ್ಯಗೊಳಿ ಸುವುದಕ್ಕೂ  ಕ್ರಮ ಕೈಗೊಳ್ಳಲಾಗು ವುದೆಂದು ಜಿಲ್ಲಾಧಿಕಾರಿ ಇಂಬಶೇಖರ್ ನುಡಿದರು.

ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಮೂಲಕ ಜ್ಯಾರಿಗೊಳಿಸಲಾಗುತ್ತಿರುವ ಜಿಲ್ಲಾ ವಿಜಿಲೆನ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲಾ ಸರಕಾರಿ ಕಚೇರಿಗಳಲ್ಲೂ ವಿಜಿಲೆನ್ಸ್‌ನ ನಂಬ್ರ ಪ್ರದರ್ಶಿಸಬೇಕು, ಭ್ರಷ್ಟಾಚಾರ ರಹಿತ ಉತ್ತಮ ಭವಿಷ್ಯಕ್ಕಾಗಿ ವಿವಿಧ ಇಲಾಖೆಗಳು ಸಭೆ ಸೇರಬೇಕೆಂದೂ   ಮುಂದಿನ ವಿಜಿಲೆನ್ಸ್ ಸಭೆಯಲ್ಲಿ ಅದರ ಮಿನಿಟ್ಸ್ ಹಾಜರುಪಡಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು. ಬಡವರಾಗಿದ್ದಾರೆ ಸರಕಾರಿ ಆಸ್ಪತ್ರೆ ಸಹಿತ ವಿವಿಧ ಕಡೆಗಳಿಗೆ ಸಹಾಯಕ್ಕಾಗಿ ತಲುಪುತ್ತಿರುವುದು. ಅವರನ್ನು ಶೋಷಿಸಬಾರದು. ಈ ರೀತಿಯ ಶೋಷಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ನುಡಿದರು.

ಈ ತಿಂಗಳ ೩೦ರಂದು ವಿಲ್ಲೇಜ್  ಅಧಿಕಾರಿಗಳ ಸಭೆ ನಡೆಸಲಾಗುವುದೆಂದೂ, ಅದರಲ್ಲಿ ವಿಜಿಲೆನ್ಸ್ ನೇತೃತ್ವದಲ್ಲಿ ತಿಳುವಳಿಕೆ ಮೂಡಿಸುವುದಾಗಿಯೂ ಅವರು ನುಡಿದರು. ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಡೆಪ್ಯುಟಿ ಪೊಲೀಸ್ ಸುಪರಿಂಡೆಂಟೆಂಟ್  ವಿ.ಕೆ. ವಿಶ್ವಂಭರನ್ ನಾಯರ್ ವಿಜಿಲೆನ್ಸ್ ಸಮಿತಿಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಹಾಯಕ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಎಡಿಎಂ ಕೆ. ನವೀನ್ ಬಾಬು, ವಿವಿಧ ಇಲಾಖೆಗಳ ಜಿಲ್ಲಾ ಮೇಧಾವಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಾರ್ವಜನಿಕ ಕಾರ್ಯಕರ್ತರು ಭಾಗವಹಿಸಿದರು. ವಿಜಿಲೆನ್ಸ್ ಯೂನಿಟ್ ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಸುನುಮೋನ್ ಸ್ವಾಗತಿಸಿ, ಜಿಲ್ಲಾ ವಿಜಿಲೆನ್ಸ್ ಯೂನಿಟ್ ಎಎಸ್‌ಐ ವಿ.ಟಿ. ಸುಭಾಶ್ಚಂದ್ರನ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page