ಜಿಲ್ಲೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡ ನವಕೇರಳ ಸಭೆ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ನೇತೃತ್ವದಲ್ಲಿ ೨೦ ಸಚಿವರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಸಿದ ಪರ್ಯಟನೆ ನಿನ್ನೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇಂದಿನಿಂದ ಕಣ್ಣೂರು ಜಿಲ್ಲೆಯ ಪರ್ಯಟನೆ ಆರಂಭಗೊಂಡಿದೆ.

ಜಿಲ್ಲೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ನವಕೇರಳ ಸಭೆಯಲ್ಲಿ ಜನರಿಂದ ೧೯೦೮ ದೂರುಗಳು ಲಭಿಸಿದೆ. ಕಾಸರಗೋಡಿ ನಿಂದ ೩೪೫೧, ಉದುಮ ೩೭೩೩, ಹೊಸದುರ್ಗ ೩೦೦೦ ಮತ್ತು ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ನವ ಕೇರಳ ಸಭೆಯಲ್ಲಿ ೨೫೧೦ ದೂರುಗಳು ಸೇರಿದಂತೆ ಒಟ್ಟು ೧೪,೬೦೨ದೂರುಗಳು ಜನರಿಂದ ಲಭಿಸಿದೆ.

ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರಕಾರಿ ಅಧಿಕಾರಿಗಳಿಗೆ ಸಲ್ಲಿಸುತ್ತಿರುವ ಅರ್ಜಿ ಗಳು ಅದು ಸರಕಾರಕ್ಕೆ ಸಲ್ಲಿಸುವ ಅರ್ಜಿ ಗಳಾಗಿವೆ. ಅವುಗಳನ್ನು ಪರಿಶೀಲಿಸುವ ಅಗತ್ಯದ ಪರಿಹಾರ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

೨೦೧೬ರಿಂದ ಕೇರಳ- ಬದ ಲಾಗತೊಡಗಿದೆ. ಎಲ್ಲಾ ವಲಯಗಳಲ್ಲೂ ರಾಜ್ಯದಲ್ಲಿ ಅಭಿವೃದ್ಧಿಗಳ ಮಹಾಪೂರವೇ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಗೈಲ್ ಗ್ಯಾಸ್‌ಲೈನ್ ಅಳವಡಿಕೆ ಇತ್ಯಾದಿಗಳು ಇದಕ್ಕೆ ಸ್ಪಷ್ಟ ನಿರ್ದೇಶನಗಳಾಗಿವೆ.  ಆದರೆ ಬಿಜೆಪಿ ಮತ್ತು ಯುಡಿಎಫ್ ಈ ವಿಷಯದಲ್ಲಿ ಪರಸ್ಪರ ಕೈಬೆಸೆದು, ಸರಕಾರದ ವಿರುದ್ಧ ರಂಗಕ್ಕಿಳಿದಿದೆ. ಎಂದು ಮುಖ್ಯಮಂತ್ರಿ ಟೀಕಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸ ಲಾಗುವುದು. ನವಕೇರಳ ಸಭೆಯಲ್ಲಿ ಭಾಗವಹಿಸದೆ ದೂರ ಸರಿದು ನಿಂತಿರುವ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರಗಳ ಶಾಸಕರು ಮತ್ತು ಮುಸ್ಲಿಂ ಲೀಗ್ ನೇತೃತ್ವ ತಮ್ಮ ಅಂತಹ ನಿಲುವನ್ನು ಮರು ಪರಿಶೀಲಿಸಲು ಮುಂದಾಗಬೇಕು. ಕೇರಳಕ್ಕೆ ಅರ್ಹವಾಗಿ ಲಭಿಸಬೇಕಾಗಿರುವ ಆರ್ಥಿಕ ಸವಲತ್ತುಗಳನ್ನು ನೀಡದೆ ಕೇಂದ್ರ ಸರಕಾರ ಕೇರಳವನ್ನು ಉಸಿರುಗಟ್ಟುವಂತೆ ಮಾಡಿದೆ. ಕೇಂದ್ರ ಕೇರಳಕ್ಕೆ ಲಭಿಸಬೇಕಾಗಿದ್ದ ೫೭,೦೦೦ ಕೋಟಿ ರೂಗಿಂತಲೂ ಹೆಚ್ಚು ಹಣ ಕಡಿತಗೊಳಿಸಿದೆ. ಇಷ್ಟೆಲ್ಲಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ, ಕೇರಳ ಅದನ್ನು ಮೀರಿ ಮುನ್ನಡೆಯುತ್ತಿದೆ. ಕಳೆದ ಏಳು ವರ್ಷಗಳಲ್ಲಿ ರಾಜ್ಯದ ತಲಾ ಆದಾಯ ೧,೪೮,೦೦೦ ಕೋಟಿ ರೂ.ನಿಂದ ಈಗ ೨,೨೮,೦೦೦ ಕೋಟಿ ರೂ.ಗೇರಿದೆ ಎಂದು ಅವರು ಹೇಳಿದ್ದಾರೆ.

ಕಾಸರಗೋಡು ವಿಧಾನಸಭಾ ಕ್ಷೇತ್ರ ದ ನವಕೇರಳ ಸಭೆ ನಿನ್ನೆ ನಾಯ ಮ್ಮಾರ್ ಮೂಲೆಯ ಚೆಂಗಳ ಪಂಚಾ ಯತ್ ಕ್ರೀಡಾಂಗಣದಲ್ಲಿ ನಡೆಯಿತು.

ನವಕೇರಳ ಸಭೆ: ಕಾಸರಗೋಡು ಮಂಡಲದಲ್ಲಿ ೩೪೫೦ ದೂರು

ಕಾಸರಗೋಡು: ನಾಯ ಮ್ಮಾರ್‌ಮೂಲೆಯಲ್ಲಿ ನಡೆದ ಕಾಸರಗೋಡು ವಿಧಾನಸಭಾ ಮಂಡಲ ನವಕೇರಳ ಸಭೆಯಲ್ಲಿ ಸಜ್ಜುಗೊಳಿಸಿದ ದೂರು ಕೌಂಟರ್‌ಗಳಲ್ಲಿ ೩೪೫೦ ದೂರುಗಳನ್ನು ಸ್ವೀಕರಿಸಲಾಗಿದೆ. ಬೆಳಿಗ್ಗೆ ೮ರಿಂದ ದೂರು ಸ್ವೀಕರಿಸಲು ಆರಂಭಿಸಲಾಗಿತ್ತು. ದೂರುಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳಿಗಾಗಿ ಪೋರ್ಟಲ್‌ನಲ್ಲಿ ನೀಡಲಾಗುವುದು. ಒಂದು ವಾರದಿಂದ ಒಂದೂವರೆ ತಿಂಗಳ ಒಳಗೆ ದೂರುಗಳಲ್ಲಿ ತೀರ್ಪು ಕಲ್ಪಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page