ಜಿಲ್ಲೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ

ಕಾಸರಗೋಡು: ಶ್ರೀಕೃಷ್ಣ ಜನ್ಮಾಷ್ಟಮಿಯಾದ ಇಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಂಭ್ರಮದ ಆಚರಣೆಗಳು ಕಂಡು ಬರುತ್ತಿದೆ. ವಿವಿಧ ಕಡೆಗಳ ಬಾಲಗೋಕುಲ, ಇತರ ಸಂಘಟನೆಗಳು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮೀಪ, ಬೋವಿಕ್ಕಾನ, ಬದಿಯಡ್ಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಮುಳ್ಳೇರಿಯ, ಕುಂಟಾರು, ಕಾರಡ್ಕ, ಕಾರ್ಲೆ, ಮಂಜೇಶ್ವರ, ಹೊಸಂಗಡಿ ಸಹಿತ ಹಲವು ಕಡೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಮ್ಮಿಕೊಳ್ಳಲಾ ಗಿದೆ. ಇದರಂಗವಾಗಿ ಧಾರ್ಮಿಕ ಸಭೆ, ಶೋಭಾಯಾತ್ರೆ, ಮುದ್ದುಕಂದ ಸ್ಪರ್ಧೆ, ರಾಧಾಕೃಷ್ಣ ವೇಷ ಸ್ಪರ್ಧೆ, ಮೊಸರುಕುಡಿಗೆ ಸಹಿತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

You cannot copy contents of this page