ಜಿಲ್ಲೆಯ ಪೊಲೀಸ್ ಪಡೆಯಿಂದ ನಾಳೆ 18 ಮಂದಿ ನಿವೃತ್ತಿ

ಕಾಸರಗೋಡು: ಕಾಸರ ಗೋಡು-ಕಣ್ಣೂರು ಕ್ರೈಂ ಬ್ರಾಂಚ್ ಎಸ್.ಪಿ ಪಿ.ಪಿ. ಸದಾನಂದನ್ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ. ಲೀಲಾ ಮತ್ತು ಕಾಸರಗೋಡು ಮಹಿಳಾ ಪೊಲೀಸ್ ಸೆಲ್‌ನ ಇನ್‌ಸ್ಪೆಕ್ಟರ್ ಎ. ಸೀತಾ ಸೇರಿದಂತೆ ಜಿಲ್ಲೆಯ ಪೊಲೀಸ್ ಪಡೆಯಿಂದ ನಾಳೆ ಒಟ್ಟು 18 ಮಂದಿ ಪೊಲೀಸರು ತಮ್ಮ ದೀರ್ಘ ಕಾಲದ ಪೊಲೀಸ್ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಹೀಗೆ ನಾಳೆ ನಿವೃತ್ತರಾಗುವವರಲ್ಲಿ 13 ಎಸ್.ಐಗಳು, ಓರ್ವ ಎ.ಎಸ್.ಐ ಮತ್ತು ಓರ್ವ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಒಳಗೊಂಡಿ ದ್ದಾರೆ. ಇಬ್ಬರು ಮಹಿಳಾ ಇನ್‌ಸ್ಪೆಕ್ಟರ್ ಗಳು ನಾಳೆ ಸೇವೆಯಿಂದ ನಿವೃತ್ತರಾ ಗಲಿರುವ ಹಿನ್ನೆಲೆಯಲ್ಲಿ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಹಾಗೂ ಮಹಿಳಾ ಸೆಲ್‌ನಲ್ಲಿ ಮಹಿಳಾ ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಹುದ್ದೆಗಳು ತೆರವು ಬೀಳಲಿದೆ.

ಆ ಸ್ಥಾನಗಳಿಗೆ ಪರ‍್ಯಾಯ ನೇಮಕಾತಿ ನಡೆಯುವ ತನಕ ಮಹಿಳಾ ಎಸ್‌ಐಗಳಿಗೆ  ಆ ಹುದ್ದೆಯ ತಾತ್ಕಾಲಿಕ ಹೊಣೆಗಾರಿಕೆ ವಹಿಸಿಕೊಡುವ ತೀರ್ಮಾನ ಕೈಗೊಳ್ಳಲಾಗಿದೆ.

RELATED NEWS

You cannot copy contents of this page