ಜಿಲ್ಲೆಯ ವಿವಿಧೆಡೆಗಳಲ್ಲಿ ದಾಳಿ: ಗಾಂಜಾ, ಮಾದಕದ್ರವ್ಯ ವಶ; ಹಲವರ ಸೆರೆ
ಕಾಸರಗೋಡು: ಕೇರಳದಲ್ಲಿ ಇತ್ತೀಚಿಗಿನಿಂದ ಮಾದಕದ್ರವ್ಯ ಪಿಡುಗು ಹೆಚ್ಚಾಗುತ್ತಿರುವಂತೆಯೇ ಅದನ್ನು ಸಮಗ್ರವಾಗಿ ತಡೆಗಟ್ಟಿ ಆರೋಪಿಗಳನ್ನು ಸೆರೆ ಹಿಡಿಯಲು ಅಬಕಾರಿ ಇಲಾಖೆ ‘ಆಪರೇಷನ್ ಕ್ಲೀನ್ ಸ್ಟೇಟ್’ ಎಂಬ ಹೆಸರಲ್ಲಿ ಹೊಸ ಕಾರ್ಯಾಚರಣೆ ಆರಂಭಿಸಿದೆ. ಇಂದಿನಿAದ ಆರಂಭಗೊA ಡ ಈ ಕಾರ್ಯಾಚರಣೆ ಈ ತಿಂಗಳ 12ರ ತನಕ ಮುಂದುವರಿಯಲಿದೆ.
ಇದರAತೆ ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಿನ್ನೆ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸೇರಿದಂತೆ ಭಾರೀ ಪ್ರಮಾಣದ ಮಾದಕ ದ್ರವ್ಯ ಪತ್ತೆಹಚ್ಚೆ ವಶಪಡಿಸಲಾಗಿದೆ. ಇದಕ್ಕೆ ಸಂಬAಧಿಸಿ ಹಲವರನ್ನು ಬಂಧಿಸಲಾಗಿದೆ.
ಈ ಕಾರ್ಯಾಚರಣೆಯಂತೆ ತಳಂಗರೆ ಬಾಂಗೋಡ್ನಲ್ಲಿ ಕಾಸರ ಗೋಡು ಅಬಕಾರಿ ರೇಂಜ್ ಆಫೀಸ್ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ವಿನೋದನ್ ಕೆ.ವಿ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ 16 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿ ಸಿದೆ. ಇದಕ್ಕೆ ಸಂಬAಧಿಸಿ ತಳಂಗರೆ ತೊಟ್ಟಿಲ್ ರಸ್ತೆ ಬಳಿಯ ಮೊಹಮ್ಮದ್ ಸಾಬಿರ್ (22) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಕಣ್ಣನ್ ಕುಂuಟಿಜeಜಿiಟಿeಜ ಟಿ, ಶ್ಯಾಮ್ಜಿತ್, ಸಂಶುದ್ದೀನ್, ಮತ್ತು ಮೈಮೋಳ್ ಜೋನ್ ಎಂಬವರು ಒಳಗೊಂಡಿದ್ದರು. ಇನ್ನೊಂದೆಡೆ ಇದೇ ಅಬಕಾರಿ ತಂಡ ತಳಂಗರೆ ನುಸ್ರತ್ನಗರ ದಲ್ಲಿ ನಡೆಸಿದ ಇನ್ನೊಂದು ಕಾರ್ಯಾ ಚರಣೆಯಲ್ಲಿ 86 ಗ್ರಾಂ ಗಾಂಜಾ ವಶಪಡಿ ಸಿಕೊಂಡಿದೆ. ಇದಕ್ಕೆ ಸಂಬAಧಿಸಿ ತಳಂಗರೆ ಹೊನ್ನಮೂಲೆ ತೆರುವತ್ನ ಶಿಹಾಬುದ್ದೀನ್ ಕೆ.ಎಸ್. (37) ಎಂಬಾ ತನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ. ಇದರ ಹೊರತಾಗಿ ಕಾಸರ ಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್ ಇನ್ಸ್ಪೆಕ್ಟರ್ ಜೋಸೆಫ್ ಜೆ.ಯವರ ನೇತೃತ್ವದ ಅಬಕಾರಿ ತಂಡ ಮುಟ್ಟತ್ತೋಡಿ ಗ್ರಾಮದ ಬೆನ್ನಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ಮತ್ತು 0.2011 ಗ್ರಾಂ ಮಾದಕ ದ್ರವ್ಯವಾದ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬAಧಿಸಿ ಅನೀಸ್ ಬಿ. ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇನ್ನೊಂ ದೆಡೆ ನೀಲೇಶ್ವರ ಎಕ್ಸೈಸ್ ಇನ್ಸ್ಪೆಕ್ಟರ್ ಎನ್. ವೈಶಾಖ್ರ ನೇತೃತ್ವದ ತಂಡ ನೀಲೇಶ್ವರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 12 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ. ಇದಕ್ಕೆ ಸಂಬAಧಿಸಿ ಚೆರ್ವತ್ತೂರು ಅಚ್ಚಾಂತು ರುತ್ತಿಯ ಹರಿಣ್ ಕುಮಾರ್ ಕೆ.ಪಿ. (31) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬದಿಯಡ್ಕ ಎಕ್ಸೈಸ್ ರೇಂಜ್ ಇನ್ಸ್ಪೆಕ್ಟರ್ ವೈ. ಸಯ್ಯೀದ್ ಮೊಹಮ್ಮದ್ರ ನೇತೃತ್ವದ ತಂಡ ಗೋಳಿಯಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 0.130 ಗ್ರಾಂ ಎಂಡಿಎAಎ ವಶಪಡಿಸಿದೆ. ಇದಕ್ಕೆ ಸಂಬAಧಿಸಿ ಗೋಳಿಯಡ್ಕದ ಮೊಹಮ್ಮದ್ ಸಿನಾನ್ (22) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.