ಜೆಸಿಐ ಬದಿಯಡ್ಕ ಟೌನ್ ಉದ್ಘಾಟನೆ

ಬದಿಯಡ್ಕ.ವಿದ್ಯಾನಗರ ಜೆಸಿಐ ಯ ನೇತೃತ್ವದಲ್ಲಿ ನೂತನವಾದ ಬದಿ ಯಡ್ಕ ಟೌನ್ ಜೇಸಿಐ ಉದ್ಘಾಟನೆ ಗೊಂಡಿತು. ಬದಿಯಡ್ಕ ಇರಾ ಹೆರಿಟೇಜ್ ರಿಸೋರ್ಟ್ ನಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿ ಬದಿಯಡ್ಕ ಪ್ರದೇಶದ ಅಭಿವೃದ್ಧಿಗೆ ಜೇಸಿಐ ನಾಂದಿಹಾಡಲಿ ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಸಮಾಜ ಸೇವೆಯನ್ನು ಮಾಡಿ ಹಿಂದುಳಿದವರ ಏಳ್ಗೆಗೆ ಶ್ರಮಿಸಬೇಕೆಂದು ಕರೆನೀಡಿದರು. ವಲಯ ಅಧ್ಯಕ್ಷ ರತೀಶ್ ಉದುಮ ಮುಖ್ಯ ಅತಿಥಿಯಾಗಿದ್ದರು. ಬದಿಯಡ್ಕ ಟೌನ್ ಪ್ರಥಮ ಅಧ್ಯಕ್ಷರಾಗಿ ಶರತ್ ಕುಮಾರ್ ಆರ್ ಪ್ರತಿಜ್ಞೆ ಸ್ವೀಕರಿಸಿದರು. ವಿದ್ಯಾನಗರ ಜೇಸಿಐ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಮೆಹರೂಫ್, ವಲಯ ಉಪಾಧ್ಯಕ್ಷ ಯತೀಶ್ ಬಲ್ಲಾಳ್, ವಿದ್ಯಾನಗರ ಜೆಸಿಐ ಅಧ್ಯಕ್ಷೆ ರಮ್ಲಾ ಅಶ್ರಫ್, ಕಾರ್ಯಕ್ರಮದ ಡೈರೆಕ್ಟರ್ ರಶೀದ್ ಕೆ.ಎಚ್,ಸಕೀನ, ಬದಿಯಡ್ಕ ಜೇಸಿಐ ಕೋಶಾಧಿಕಾರಿ ಚಂದ್ರಶೇಖರ ಎ. ಎನ್, ಸದಸ್ಯರಾದ ಸಾಬಿತ್ ಬದಿಯಡ್ಕ, ಮುನ್ಸಿನ್ ಮೊಹಮ್ಮದ್, ನವೀನ್ ಕುಮಾರ್ ಪಿ,ರಾಜೀವ್ ಪಿ.ವಿ,ನೌಫಾಲ್ ಕುಂಬ್ದಾಜೆ, ಮುನಝೀರ್ ಟಿ ಎಂ, ಶೇಫಿಕ್ ನೆಲ್ಲಿಕಟ್ಟ,ದಿವ್ಯಾ ಕದ್ರಿ, ಮಹೇಶ್ ಏತಡ್ಕ,ಅಬ್ದುಲ್ ರಶೀದ್,ರಾಜ ನೀಲಾಂಬರಿ, ಪ್ರಶಾಂತ್ ಉಬ್ರಂಗಳ, ಇಬ್ರಾಹಿಂ ಸಿದ್ಧಿಕಿ, ಚಿತ್ರೇಶ್, ನವಪ್ರಸಾದ್ ಭಾಗವಹಿಸಿದರು. ವ್ಯಾಪಾರ ಕ್ಷೇತ್ರದ ಸಾಧಕ ಅಶ್ರಫ್ ಸಿ.ಎಚ್‌ರನ್ನು ಅಭಿನಂದಿಸಲಾಯಿತು. ರಶೀದ್ ಕೆ ಎಚ್ ಸ್ವಾಗತಿಸಿ, ಸಾಬಿತ್ ವಂದಿಸಿದರು. ದಿವ್ಯಾ ಕದ್ರಿ, ರಾಜ ನೀಲಾಂಬರಿ ನಿರೂಪಿಸಿದರು.

RELATED NEWS

You cannot copy contents of this page