ಜೆಸಿಐ ಬದಿಯಡ್ಕ ಪೇಟೆ ಘಟಕದಿಂದ ಡಾಕ್ಟರ್, ಯುವ ಉದ್ಯಮಿಗೆ ಅಭಿನಂದನೆ
ಬದಿಯಡ್ಕ: ಜೆಸಿಐ ಬದಿಯಡ್ಕ ಪೇಟೆ ಘಟಕ ಉದ್ಘಾಟನೆ ಕಾರ್ಯಕ್ರಮದಂಗವಾಗಿ ಬದಿಯಡ್ಕದ ಆರೋಗ್ಯವಲಯದಲ್ಲಿ ಮಾದರಿ ಚಟುವಟಿಕೆ ನಡೆಸುತ್ತಿರುವ ಡಾ. ಶ್ರೀನಿಧಿ ಸರಳಾಯ, ಯುವ ಉದ್ಯಮಿ ಸಿ.ಎಚ್. ಅಶ್ರಫ್ ಚೆರುಣಿ ಎಂಬಿವರನ್ನು ಗೌರವಿಸಲಾಯಿತು. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ವಲಯ ಅಧ್ಯಕ್ಷ ರಜೀಶ್ ಉದುಮ ಮುಖ್ಯ ಅತಿಥಿಯಾಗಿದ್ದರು. ಬದಿಯಡ್ಕ ಟೌನ್ ಘಟಕದ ಪ್ರಥಮ ಅಧ್ಯಕ್ಷರಾಗಿ ಆರ್. ಶರತ್ ಕುಮಾರ್ ಅಧಿಕಾರ ಸ್ವೀಕರಿಸಿದರು. ಮಾಜಿ ವಲಯ ಅಧ್ಯಕ್ಷ ಅಬ್ದುಲ್ ಮಹರೂಫ್ ಟಿ.ಎಂ. ಮಾತನಾಡಿದರು. ವಲಯ ಉಪಾಧ್ಯಕ್ಷ ಯತೀಶ್ ಬಲ್ಲಾಳ್, ವಿದ್ಯಾನಗರ ಜೆಸಿಐ ಅಧ್ಯಕ್ಷೆ ರಮ್ಲಾ ಅಶ್ರಫ್, ರಶೀದ್ ಕೆ.ಎಚ್, ಮುಹಸಿನ್ ಮುಹಮ್ಮದ್, ನವೀನ್ ಕುಮಾರ್, ರಾಜೀವ್ ಪಿ, ನೌಫಲ್ ಕುಂಬ್ಡಾಜೆ, ಮುಹಾಜಿರ್ ಟಿ.ಎಂ, ಶಫೀಕ್ ನೆಲ್ಲಿಕಟ್ಟೆ, ದಿವ್ಯ ಕದ್ರಿ, ರವಿಶಂಕರ, ಮಹೇಶ್, ಅಬ್ದುಲ್ ರಶೀದ್, ರಾಜ್, ಪ್ರಶಾಂತ್ ಬಳ್ಳುಳ್ಳಾಯ, ಇಬ್ರಾಹಿಂ ಸಿದ್ದಿಕ್, ರಾಶಿದ್ ಕೆ.ಎಚ್, ಸಾಬಿತ್ ಬದಿಯಡ್ಕ ಭಾಗವಹಿಸಿದರು.