ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತೆ ಮಾದಕವಸ್ತು ಮಾರಾಟ: ಕಾರಿನಲ್ಲಿ ಸಾಗಿಸುತ್ತಿದ್ದ 41.250 ಗ್ರಾಂ ಎಂಡಿಎಂಎ ಸಹಿತ ಇಬ್ಬರ ಸೆರೆ
ಹೊಸದುರ್ಗ: ಮಾದಕ ವಸ್ತು ಪ್ರಕರಣದಲ್ಲಿ ಸೆರೆಗೀಡಾಗಿ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಯುವಕರು 41.250 ಗ್ರಾಂ ಎಂಡಿಎಂಎ ಸಹಿತ ಸೆರೆಗೀಡಾಗಿದ್ದಾರೆ. ಪರಿಯಾರಂ ಚೂಡಲ ಕಾನತ್ತ ಎಂಬಲ್ಲಿನ ಮುಹಮ್ಮದ್ ಅಫ್ರೀದ್ (24), ತಳಿಪರಂಬ ಸಯ್ಯೀದ್ ನಗರದ ಮುಹಮ್ಮದ್ ದಿಲ್ಶಾದ್ (30) ಎಂಬಿವರನ್ನು ಪಯ್ಯನ್ನೂರು ಪೊಲೀಸರು ಹಾಗೂ ಕಣ್ಣೂರು ರೂರಲ್ ಜಿಲ್ಲಾ ಮಾದಕ ವಿರುದ್ಧ ಸ್ಕ್ವಾಡ್ ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದೆ. ಆರೋಪಿಗಳು ಕಾರಿನಲ್ಲಿ ಮಾದಕವಸ್ತು ಸಹಿತ ಸಂಚರಿಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಹಲವು ಬಾರಿ ಸೆರೆಗೀಡಾಗಿದ್ದು, ಜೈಲು ವಾಸ ಅನುಭವಿಸಿದ್ದರೆಂದೂ ಪೊಲೀಸರು ತಿಳಿಸಿದ್ದಾರೆ. ಮುಹಮ್ಮದ್ ಅಫ್ರೀದ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದನು. ಪಯ್ಯನ್ನೂರು ಎಸ್‌ಐ ಪಿ.ಎ. ಟೋಮಿ, ಗ್ರೇಡ್ ಎಸ್‌ಐಗಳಾದ ಮನೋಜ್ ಕುಮಾರ್, ಜೋಮಿ ಜೋಸೆಫ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಅಬ್ದುಲ್ ಜಬ್ಬಾರ್, ಸಿಪಿಒ ಸಂಶುದ್ದೀನ್ ಹಾಗೂ ಡಾನ್ಸಾಫ್ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿದ್ದಾರೆ.