ಜ್ವರ ತಗಲಿ ಚಿಕಿತ್ಸೆಯಲ್ಲಿದ್ದ ಬಾಲಕಿ ನಿಧನ

ಮಂಜೇಶ್ವರ: ಜಿಲ್ಲೆಯಲ್ಲಿ ಜ್ವರ ಬಾಧಿತರ ಸಂಖ್ಯೆ ಹೆಚ್ಚುತ್ತಿರುವಂತೆ ಅಲ್ಲಲ್ಲಿ ಜ್ವರಕ್ಕೆ ಜೀವ ಹಾನಿ ಸಂಭವಿ ಸುತ್ತಿರುವುದು ಆತಂಕಕ್ಕೆ ಕಾರಣವಾ ಗಿದೆ. ಮೀಂಜ ಪಟ್ಟತ್ತಮೊಗರು ಕುದುರು ನಿವಾಸಿ ಛಾಯಾಗ್ರಾಹಕ ದೀಕ್ಷಿತ್‌ರ ಪುತ್ರಿ ಆತ್ಮಿ (೪) ಇಂದು ಮುಂಜಾನೆ ನಿಧನಳಾಗಿದ್ದಾಳೆ. ಕೊಡ್ಡೆ ಅಂಗನವಾಡಿಗೆ ತೆರಳುತ್ತಿದ್ದ ಬಾಲಕಿಗೆ ಎರಡು ಮೂರು ದಿನದ ಹಿಂದೆ ಜ್ವರ ತಗಲಿತ್ತು. ಬಳಿಕ ಸ್ಥಳೀಯ ಆಸ್ಪತ್ರೆಯಿಂ ದ ಚಿಕಿತ್ಸೆ ಪಡೆದಿದ್ದರು. ನಿನ್ನೆ ಬೆಳಿಗ್ಗೆ ಜ್ವರ ಹೆಚ್ಚಾದ ಕಾರಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಬಾಲಕಿ ಅಸು ನೀಗಿದ್ದಾಳೆ. ಮೃತ ಬಾಲಕಿ ತಂದೆ, ತಾಯಿ ಶಿಲ್ಪಾ ಏಕ ಸಹೋದರಿ ಧ್ವನಿಯನ್ನು ಅಗಲಿದ್ದಾಳೆ.

RELATED NEWS

You cannot copy contents of this page