ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಪ್ಲಸ್-ಟು ವಿದ್ಯಾರ್ಥಿನಿ ಮೃತ್ಯು
ಕಾಸರಗೋಡು: ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಪ್ಲಸ್‌ಟು ವಿದ್ಯಾರ್ಥಿನಿ ಮೃತಪಟ್ಟಳು. ಚಂದ್ರಗಿರಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು (ಕಾಮರ್ಸ್) ವಿದ್ಯಾರ್ಥಿನಿ ಎಸ್.ಎಂ. ವೈಷ್ಣವಿ (17) ಮೃತಪಟ್ಟ ದುರ್ದೈವಿ. ಜ್ವರ ಬಾಧಿಸಿದ್ದ ಈಕೆಯನ್ನು ಮೊದಲು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅನಂತರ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಗಿತ್ತು. ಕಳೆದ ಹದಿನೈದು ದಿನಗಳಿಂದ ಅಲ್ಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿನಿ ನಿನ್ನೆ ಬೆಳಿಗ್ಗೆ ಮೃತಪಟ್ಟಳು. ಮೃತದೇಹವನ್ನು ತಂದೆಯ ಊರಾದ ಕಲ್ಲಿಕೋಟೆ ಬಾಲುಶ್ಶೇರಿ ಕರಿಯತ್ತವ್ ಕಾವ್‌ಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಯಿತು. ದಿ| ಎಸ್.ಎಂ. ಶಶಿ-ಎಂ.ಕೆ. ಶುಭ ದಂಪತಿ ಪುತ್ರಿಯಾದ ಮೃತಳು ಓರ್ವ ಸಹೋದರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾಳೆ.

x