ಟಿಪ್ಪರ್ ಲಾರಿ ಢಿಕ್ಕಿ: ಶೋಭಾಯಾತ್ರೆ ನೋಡಲು ನಿಂತಿದ್ದ ಮಹಿಳೆ ಮೃತ್ಯು
ಬದಿಯಡ್ಕ: ಬದಿಯಡ್ಕದಲ್ಲಿ ನಡೆದ ಶ್ರೀ ಗಣೇಶೋತ್ಸವದ ವೈಭ ವದ ಶೋಭಾಯಾತ್ರೆಯನ್ನು ನೋq ಲೆಂದು ರಸ್ತೆ ವಿಭಾಜಕದಲ್ಲಿ ನಿಂತು ಕಾಯುತ್ತಿದ್ದ ಮಹಿಳೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ.
ಬದಿಯಡ್ಕ ವಳಮಲೆ ನಿವಾಸಿ ಸುನಿತಾ ಶೆಟ್ಟಿ (೫೫) ಮೃತಪಟ್ಟವರು. ಬದಿಯಡ್ಕ ಟ್ರಾಫಿಕ್ ಸರ್ಕಲ್ ಬಳಿ ಅಪಘಾತ ಸಂಭವಿಸಿದೆ. ಶೋಭಾಯಾತ್ರೆ ನೋಡಲೆಂದು ಪೇಟೆಯಲ್ಲಿ ಜನಸಂದಣಿ ಸೇರಿತ್ತು. ಈ ಮಧ್ಯೆ ರಸ್ತೆ ವಿಭಾಜಕದಲ್ಲಿ ನಿಂತಿದ್ದ ಮಹಿಳೆ ಅಕಸ್ಮಾತ್ ರಸ್ತೆಗೆ ಬಿದ್ದಿರಬೇಕೆಂದು ಶಂಕಿಸಿದ್ದು, ಈ ದಾರಿಯಾಗಿ ಬರುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಕೂಡಲೇ ಗಾಯಾಳುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿ ಮೃತಪಟ್ಟರು. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಪೋಸ್ಟ್ ಮಾರ್ಟಂ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು.
ಮೃತರು ಪತಿ ರಾಧಾಕೃಷ್ಣ ಶೆಟ್ಟಿ, ಪುತ್ರ ಸತೀಶ, ಸಹೋದರ ಶೇಖರ, ಸಹೋದರಿಯರಾದ ವಸಂತಿ, ಯಶೋಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.