ಟೋರಸ್ ಲಾರಿ ಸ್ಕೂಟರ್‌ಗೆ ಢಿಕ್ಕಿ: ಯುವಕ ದಾರುಣ ಮೃತ್ಯು

ಕಾಸರಗೋಡು: ಟೋರಸ್ ಲಾರಿ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮೇಲ್ಪರಂಬ ಒರವಂಕರದ ಶರೀಫ್ ಹಾಗೂ ಖೈರುನ್ನಿಸಾರ ಪುತ್ರ ಮುಹಮ್ಮದ್ ಹನೀಫ್ (26) ಮೃತಪಟ್ಟ ದುರ್ದೈವಿ. ನಿನ್ನೆ ರಾತ್ರಿ 8.40ರ ವೇಳೆ ಚೆಮ್ನಾಡ್ ಜಮಾಅತ್ ಹೈಸ್ಕೂಲ್ ಸಮೀಪ ರಾಜ್ಯ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಹೊಂಡಕ್ಕೆ ಸಿಲುಕಿಕೊಂಡ ಸ್ಕೂಟರ್‌ನ ಹಿಂದೆ ಬಂದ ಲಾರಿ ಢಿಕ್ಕಿ ಹೊಡೆದು ಹನೀಫ್ ರಸ್ತೆಗೆಸೆಯಲ್ಪಟ್ಟಿದ್ದರೆಂದು ಹೇಳಲಾಗುತ್ತಿದೆ.

ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈದುಲ್ ಫಿತ್ ಹಬ್ಬಕ್ಕಾಗಿ ಗಲ್ಫ್‌ನಿಂದ ಊರಿಗೆ ಬಂದ ಹನೀಫ್ ಮುಂದಿನ ವಾರ ಮರಳಿ ಗಲ್ಫ್‌ಗೆ ತೆರಳಲು ಸಿದ್ಧತೆಯಲ್ಲಿದ್ದರು. ಇವರಿಗೆ ದುಬಾಯಲ್ಲಿ ಹಡಗಿನಲ್ಲಿ ಹೊಸತಾಗಿ ಕೆಲಸ ಲಭಿಸಿತ್ತೆನ್ನಲಾಗಿದೆ. ಮೃತರು ಸಹೋದರರಾದ ಸಾಹಿಸ್, ಶಂನವಾಸ್, ಶರೀಫ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page