ಟ್ರೇಡಿಂಗ್ ಕಂಪೆನಿಯ ಶೇರು ಭರವಸೆ ನೀಡಿ ವ್ಯಕ್ತಿಯ 43 ಲಕ್ಷ ರೂ. ವಂಚಿಸಿದ ಬಗ್ಗೆ ಸೈಬರ್ ಠಾಣೆಗೆ ದೂರು
ಕಾಸರಗೋಡು: ಟ್ರೇಡಿಂಗ್ ಕಂಪೆನಿಯಲ್ಲಿ ಶೇರು ನೀಡುವುದಾಗಿ ತಿಳಿಸಿ ಮಾಂuಟಿಜeಜಿiಟಿeಜಡ್ ನಿವಾಸಿಯ 43 ಲಕ್ಷ ರೂ. ಅಪಹರಿಸಿರುವುದಾಗಿ ದೂರಲಾಗಿದೆ. ಬಾರಾ ನಿವಾಸಿ ಇ. ರಾಜಗೋಪಾಲನ್ ನೀಡಿದ ದೂರಿನಂತೆ ಸೈಬರ್ ಪೊಲೀಸ್ ಕೇಸು ದಾಖಲಿಸಿದ್ದಾರೆ.
ಕಾಸರಗೋಡು ಸೈಬರ್ ಠಾಣೆಯಲ್ಲಿ ಈ ವರ್ಷ ನೋಂದಾಯಿಸಿದ ಮೊದಲ ಪ್ರಕರಣವಾಗಿದೆ ಇದು. 2025 ಫೆಬ್ರವರಿ 22ರಿಂದ ಮಾರ್ಚ್ 21ರವರೆಗಿರುವ ದಿನಗಳಲ್ಲಿ 73 ಎಎಸ್ಕೆ ಎಲೈಟ್ ವೆಲ್ತ್ ಟ್ರೇಡಿಂಗ್ ಕಂಪೆನಿಯ ಪ್ರತಿನಿಧಿ ಎಂಬ ನೆಲೆಯಲ್ಲಿ ಫೋನ್ ಕರೆ ಮಾಡಿ ವಂಚನೆ ನಡೆಸಲಾಗಿತ್ತು. ಬಳಿಕ ವಾಟ್ಸಪ್ ಸಂದೇಶದ ಮೂಲಕ ಸಂಪರ್ಕ ನಡೆಸಿ ವಿಶ್ವಾಸ ಗಳಿಸಿದ ಬಳಿಕ ಎಎಸ್ಕೆಎಲ್ಎ ಟಾಪ್ ಎಂಬ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಸಲಾಗಿದೆ. ಆ ಮೂಲಕ ವಿವಿಧ ಬ್ಯಾಂಕ್ ಖಾತೆಗಳಿಗೆ ಹಲವು ದಿನಗಳಲ್ಲಾಗಿ 43 ಲಕ್ಷ ರೂ.ವನ್ನು ಪಾವತಿ ಸುವಂತೆ ಮಾಡಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆದರೆ ಹಣ ಅಥವಾ ಕಂಪೆನಿಯ ಶೇರು ನೀಡದೆ ವಂಚಿಸಿದ್ದಾರೆ ನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.