ತಂತಿ ಬೇಲಿಯಲ್ಲಿ ಸಿಲುಕಿದ ಚಿರತೆ

ಪಾಲಕ್ಕಾಡ್: ನಾಡಿಗಿಳಿದ ಚಿರತೆಯೊಂದು ಕೃಷಿ ಸ್ಥಳದ ತಂತಿ ಬೇಲಿಯೊಳಗೆ ಸಿಲುಕಿಕೊಂಡಿದೆ.  ಪಾಲಕ್ಕಾಡ್ ಕೊಲ್ಲಂಕೋಡ್ ವಾಳಪ್ಪುಳದಲ್ಲಿ ಇಂದು ಮುಂಜಾನೆ ವೇಳೆ ಚಿರತೆ ತಂತಿ ಬೇಲಿಯಲ್ಲಿ ಸಿಲು ಕಿಕೊಂಡಿರುವುದು ಕಂಡು ಬಂದಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.  ಚಿರತೆಗೆ ಮಾದಕಗುಂಡು ಹಾರಿಸಿ ಸುರಕ್ಷಿತ ಪ್ರದೇಶಕ್ಕೆ ತಲುಪಿಸಲು ಆಲೋ ಚಿಸಲಾಗುತ್ತಿದೆ. ವನ್ಯ ಮೃಗಗಳು ನಿರಂತರ ದಾಳಿ ನಡೆಸುವ ಸ್ಥಳ ಇದಾಗಿದೆ. ಕೈಕಾಲುಗಳಿಗೆ ತಂತಿ ಸಿಲುಕಿಕೊಂಡಿರುವುದರಿಂದ ಚಿರತೆಗೆ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.

You cannot copy contents of this page