ತಂದೆಯ ತಲೆಗೆ ಹೊಡೆದು ಕೊಲೆಗೈದ ಆರೋಪಿ ಪತ್ನಿ ಮನೆಯ ಬಾವಿಯ ರಾಟೆಹಗ್ಗದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ತೆಂಗಿನಕಾಯಿ ಸುಲಿಯುವ ಉಪಕರಣದಿಂದ ತಂದೆಯ ತಲೆಗೆ ಹೊಡೆದು ಪೈಶಾಚಿಕ ರೀತಿಯಲ್ಲಿ ಕೊಲೆಗೈದ ಪ್ರಕರಣದಲ್ಲಿ ಆರೋ ಪಿಯಾದ ಮಗ ಆತನ ಪತ್ನಿ ಮನೆಯ ಬಾವಿಯ ರಾಟೆ ಹಗ್ಗದಲ್ಲಿ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಪಳ್ಳಿಕ್ಕೆರೆ ಸೈಂಟ್ ಮೇರೀಸ್ ಶಾಲೆ ಸಮೀಪದ ದಿ| ಅಪ್ಪಕುಂಞಿ ಎಂಬವರ ಪುತ್ರ ಪ್ರಮೋದ್ (36) ಎಂಬಾತ ಇಂದು ಬೆಳಿಗ್ಗೆ ಉದುಮ ನಾಲಾಂವಾದುಕಲ್‌ನಲ್ಲಿರುವ ಪತ್ನಿ ಮನೆಯ ಬಾವಿಯ ರಾಟೆ ಹಗ್ಗದಲ್ಲಿ  ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ವಿಷಯ ತಿಳಿದು ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ತಂದೆಯಾದ ಅಪ್ಪಕುಂಞಿ (65)ಯನ್ನು 2024 ಎಪ್ರಿಲ್ ೧ರಂದು ಸಂಜೆ ಪ್ರಮೋದ್ ಪೈಶಾಚಿಕ ರೀತಿಯಲ್ಲಿ ಕೊಲೆಗೈದಿ ದ್ದನು.  ಈ ಘಟನೆಯ ಎರಡು ದಿನಗಳ ಮೊದಲು ಅಪ್ಪಕುಂಞಿ ಮೇಲೆ ಪ್ರಮೋದ್ ಹಲ್ಲೆ ನಡೆಸಿದ್ದು ಈ ಬಗ್ಗೆ ಬೇಕಲ ಪೊಲೀಸರು ಪ್ರಮೋದ್‌ನ ವಿರುದ್ದ ಕೇಸು ದಾಖಲಿಸಿದ್ದರು. ಈ ದ್ವೇಷದಿಂದ  ಎಪ್ರಿಲ್ 1ರಂದು ಸಂಜೆ ಮನೆಗೆ ತಲುಪಿದ ಪ್ರಮೋದ್ ಬಾಗಿಲು ಮೆಟ್ಟಿ ಮುರಿದು ಮನೆಯೊಳಗೆ ನುಗ್ಗಿ ಅಪ್ಪಕುಂಞಿಯ ತಲೆಗೆ ತೆಂಗಿನಕಾ ಯಿ ಸುಲಿಯುವ ಉಪಕರಣದಿಂದ ಹೊಡೆದು  ಅವರನ್ನು  ಪೈಶಾಚಿಕ ರೀತಿಯಲ್ಲಿ ಕೊಲೆಗೈದಿದ್ದನು. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಅಪ್ಪಕುಂಞಿಯನ್ನು ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಕೊಲೆ ಪ್ರಕರಣದಲ್ಲಿ ಸೆರೆಗೀಡಾದ ಪ್ರಮೋದ್‌ಗೆ 2024 ಅಕ್ಟೋಬರ್ ತಿಂಗಳಲ್ಲಿ ಜಾಮೀನು ಲಭಿಸಿತ್ತು. ಕೊಲೆ ಪ್ರಕರಣದ ವಿಚಾರಣೆ ಆರಂಭಗೊಂಡಿದ್ದು, ಜನವರಿ 13ರಂದು ಮತ್ತೆ ಕೇಸು ಪರಿಗಣಿಸಲಿರುವಂತೆಯೇ ಪ್ರಮೋದ್ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಇದೇ ವೇಳೆ ಪ್ರಮೋದ್‌ನ ಪತ್ನಿ ನಾಲ್ಕು ತಿಂಗಳ ಹಿಂದೆ ವಿವಾಹ ವಿಚ್ಛೇಧನ ನಡೆಸಿರುವು ದಾಗಿ ಹೇಳಲಾಗುತ್ತಿದೆ. ಇದೇ ಕಾರಣದಿಂದ ಪ್ರಮೋದ್ ಪತ್ನಿಯ ನಾಲಾಂವಾದುಕಲ್ ನಲ್ಲಿರುವ ಮನೆಯ ಬಾವಿಯ ರಾಟೆ ಹಗ್ಗದಲ್ಲಿ ನೇಣುಬಿಗಿದು ಸಾವಿಗೀಡಾಗಿರಬಹುದೆಂದು ಹೇಳಲಾಗುತ್ತಿದೆ.

RELATED NEWS

You cannot copy contents of this page