ತನಿಖೆಗೆ ಹೋದ ಎಸ್ಐಗೆ ಕಚ್ಚಿ ಗಾಯಗೊಳಿಸಿದ ಆರೋಪಿ ಸೆರೆ
ಕಾಸರಗೋಡು: ದೂರಿನ ಬಗ್ಗೆ ತನಿಖೆ ನಡೆಸಲು ಬಂದ ಎಸ್ಐಯ ಕೈಗೆ ಕಚ್ಚಿ ಗಾಯಗೊಳಿಸಿದ ಆರೋಪಿ ಯನ್ನು ಪೊಲೀಸರು ಬಂಧಿಸಿದ್ದಾರೆ. ವೆಳ್ಳರಿಕುಂಡು ಮಾಲೋಂ ಕಾರ್ಯಾ ಟ್ಟುಚ್ಚಾಲ್ ಕಾಂಞಿರಕುಡಿ ನಿವಾಸಿ ಮಣಿಯರ ರಾಘವನ್ (50) ಬಂಧಿತ ಆರೋಪಿ. ವೆಳ್ಳರಿಕುಂಡು ಪೊಲೀಸ್ ಠಾಣೆ ಯ ಎಸ್ಐ ಅರುಣ್ ಮೋಹನ್ ರ ಕೈಗೆ ಕಚ್ಚಿ ಗಾಯಗೊಳಿಸಿದ ದೂರಿ ನಂತೆ ವೆಳ್ಳರಿಕುಂಡ್ ಪೊಲೀಸರು ರಾಘವನ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಆತನ ತಾಯಿ ವೆಳ್ಳಚ್ಚಿ ಮತ್ತು ಸಹೋ ದರನಿಗೆ ನಿರಂತರವಾಗಿ ಬೆದರಿಕೆಯೊ ಡ್ಡುತ್ತಿ ರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಎಸ್ಐ ಅರುಣ್ ಮೋಹನ್ ಆ ಬಗ್ಗೆ ತನಿಖೆ ನಡೆಸಲೆಂದು ಹೋದಾಗ ಆರೋಪಿ ಅವರ ಮೇಲೆ ಎರಗಿ ಕೈಗೆ ಕಚ್ಚಿ ಗಾಯ ಗೊಳಿಸಿರುವುದಾಗಿ ಆರೋಪಿಸಲಾಗಿದೆ. ಆ ಬಗ್ಗೆ ಎಸ್ಐ ನೀಡಿದ ದೂರಿನಂತೆ ಅವರಿಗೆ ಕಚ್ಚಿ ಗಾಯಗೊಳಿಸಿದ ಹಾಗೂ ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟುಮಾಡಿದ ಸೆಕ್ಷನ್ ಪ್ರಕಾರ ಆರೋಪಿ ವಿರುದ್ಧ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.