ಕಾಸರಗೋಡು: ಕಾಸರಗೋಡು ತಳಂಗರೆ ಕಡವತ್‌ನ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುತ್ತಿರುವ ಮೂಲತಃ ತಮಿಳುನಾಡು ನಿವಾಸಿ ನಿರ್ಮಾಣ ಕಾರ್ಮಿಕರಾದ ಶೆಲ್ವಂ-ಜ್ಯೋತಿ ದಂಪತಿ ಪುತ್ರಿ ಶರಣ್ಯ (21) ನಿನ್ನೆಯಿಂದ ನಾಪತ್ತೆಯಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ನಾಪತ್ತೆಯಾದ ಶರಣ್ಯ ತನ್ನ ಹೆಸರು ಬದಲಾಯಿಸಿ ಸ್ನೇಹ ಎಂಬ ಹೆಸರಲ್ಲಿ ಬಸ್ ಕಾರ್ಮಿಕನೋರ್ವನನ್ನು ಮೊಬೈಲ್ ಫೋನ್ ಮೂಲಕ ಪದೇ ಪದೇ ಸಂಪರ್ಕಿಸುತ್ತಿದ್ದಳೆಂದೂ, ಆದ್ದರಿಂದ ಅದರ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶರಣ್ಯಳ ಮೊಬೈಲ್ ಫೋನ್ ಈಗ ಸ್ವಿಚ್‌ಆಫ್ ಆದ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
