ತಾನೂರಿನಿಂದ ನಾಪತ್ತೆಯಾದ ಪ್ಲಸ್ ವನ್ ವಿದ್ಯಾರ್ಥಿನಿಯರು ಮುಂಬಯಿಯಲ್ಲಿ ಪತ್ತೆ
ಮುಂಬಯಿ: ತಾನೂರಿನಿಂದ ನಾಪತ್ತೆ ಯಾಗಿದ್ದ ಇಬ್ಬರು ಪ್ಲಸ್ ವನ್ ವಿದ್ಯಾರ್ಥಿ ನಿಯರನ್ನು ಮುಂಬಯಿಯಿಂದ ಪತ್ತೆಹಚ್ಚ ಲಾಗಿದೆ. ಮುಂಬಯಿ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣದಿಂದ ಇವರನ್ನು ಪತ್ತೆಹಚ್ಚಿ ರುವುದಾಗಿ ರೈಲ್ವೇ ಪೊಲೀಸರು ತಿಳಿಸಿದ್ದಾರೆ. ಮುಂಬಯಿಯ ಕೇರಳೀಯರ ಸೆಲೂನ್‌ಗೆ ಇವರು ತಲುಪಿರುವುದಾಗಿ ಪೊಲೀಸರಿಗೆ ಈ ಮೊದಲೇ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ಸೆಲೂನ್ ಮಾಲಕ ಈ ವಿಷಯವನ್ನು ಖಚಿತಪಡಿಸಿದ್ದನು. ಈ ಮಧ್ಯೆ ಪೊಲೀಸರು ಮುಂಬಯಿಯ ಮಲೆಯಾಳಿ ಅಸೋಸಿಯೇಷನ್ ಕಾರ್ಯಕರ್ತರಿಗೆ ಮಾಹಿತಿ ರವಾನಿಸಿ ದ್ದರು. ವಿದ್ಯಾರ್ಥಿನಿಯರ ಜೊತೆ ಎಡವಣ್ಣ ನಿವಾಸಿ ರಹೀಂ ಅಸ್ಲಾಂ ಎಂಬ ವ್ಯಕ್ತಿಯೂ ಇದ್ದುದಾಗಿ ಪೊಲೀಸರು ಸೂಚಿಸಿದ್ದಾರೆ. ಈ ಮಾಹಿತಿಯನ್ನು ಮನೆಯವರಿಗೆ ತಿಳಿಸಿರುವುದಾಗಿ ಪೊಲೀಸರು ನುಡಿದಿದ್ದಾರೆ. ಸೆರೆಯಾದ ಇವರು ಮನೆಗೆ ತೆರಳಲು ವಿಸಮ್ಮತಿಸಿ ರುವುದಾಗಿ ಪೊಲೀಸರು ಸೂಚಿಸಿದ್ದಾರೆ.