ತಾಯಿ ಮನೆಗೆ ಬಂದ ಯುವತಿಗೆ ಹಲ್ಲೆ: ಸಹೋದರನ ವಿರುದ್ಧ ನರಹತ್ಯಾ ಯತ್ನ ಕೇಸು
ಬದಿಯಡ್ಕ: ತಾಯಿ ಮನೆಗೆ ಬಂದಿದ್ದ ಯುವತಿಗೆ ಸಹೋದರ ನೋರ್ವ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಇದರಂತೆ ಆತನ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು ದಾಖಲಿಸಿ ಕೊಂಡಿದ್ದಾರೆ. ನೆಲ್ಲಿಕಟ್ಟೆ ಚೆನ್ನಡ್ಕದ ಮೊಹಮ್ಮದ್ ಸಫ್ವಾನ್ ವಿರುದ್ಧ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀ ಸರು ತಿಳಿಸಿ ದ್ದಾರೆ. ನೆಲ್ಲಿಕಟ್ಟೆ ಆಮೂಸ್ ನಗರದ ಸಾಜುದ್ದೀನ್ರ ಪತ್ನಿ ಆಯಿಷತ್ ಅಸ್ನ (೨೫)ಳಿಗೆ ಮೊಹಮ್ಮದ್ ಸಫ್ವಾನ್ ಹಲ್ಲೆಗೈದಿದ್ದಾ ನೆಂದು ದೂರಲಾಗಿದೆ. ಇತ್ತೀಚೆಗೆ ತಾಯಿ ಮನೆಗೆ ಬಂದಿದ್ದ ವೇಳೆ ಬೆತ್ತ ಹಾಗೂ ಸಟ್ಟುಗದಿಂದ ಹಲ್ಲೆ ನಡೆಸಿರುವುದಾಗಿ ಆಯಿಷತ್ ಅಸ್ನ ದೂರಿದ್ದಾರೆ. ಇದರಿಂದ ಗಾಯಗೊಂಡ ಯುವತಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವುದಾಗಿ ತಿಳಿಸಲಾಗಿದೆ.