ತಿಂಗಳ ಹಿಂದೆ ಪತ್ನಿ ನೇಣು ಬಿಗಿದು ಸಾವು: ಯುವಕ ರೈಲು ಢಿಕ್ಕಿ ಹೊಡೆದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವಕನೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಲಾಮಿಪಳ್ಳಿ ಕಲ್ಲಂಚಿರದ ಶಿಜು (35) ಎಂಬಿವರು ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 8.30ರ ವೇಳೆ ಚಿತ್ತಾರಿ ಚಾಮುಂಡಿಕುನ್ನು ಸಮೀಪ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇವರ ಗರ್ಭಿಣಿಯಾದ ಪತ್ನಿ ಅಂಜಲಿ ಒಂದು ತಿಂಗಳ ಹಿಂದೆ ಕುಲಾಂ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅನಂತರ ಶಿಜು ತೀವ್ರ ಮನನೊಂದಿದ್ದರೆನ್ನಲಾಗಿದೆ. ಶಿಜು ವೆಲ್ಡಿಂಗ್ ಕಾರ್ಮಿಕನಾಗಿದ್ದರು. ದಿ| ಕುಂಞಿಕೃಷ್ಣನ್- ಪುಷ್ಪ ದಂಪತಿಯ ಪುತ್ರನಾದ ಮೃತರು ಸಹೋದರರಾದ ಶಿಜಿತ್, ಶೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.