ತಿರುವಲ್ಲಿರುವ ವಿದ್ಯುತ್ ಕಂಬದ ಆಧಾರತಂತಿಯಿಂದ ಅಪಾಯ ಭೀತಿ
ಮಂಜೇಶ್ವರ: ಬಂಗ್ರಮಂಜೇಶ್ವರ ರಸ್ತೆಯ ತಿರುವಿನಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸಿದ ಆಧಾರತಂತಿ ವಾಹನ ಸವಾರರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಈ ತಂತಿ ಹೊಸಂಗಡಿ ಭಾಗಕ್ಕೆ ಬರುವ ವಾಹನ ಸವಾರರ ಗಮನಕ್ಕೆ ಬಾರದೆ ಎದುರಿನಿಂದ ಆಗಮಿಸುತ್ತಿರುವ ವಾಹನಗಳಿಗೆ ಸಾಗಲು ಸೈಡ್ ನೀಡುವ ವೇಳೆ ತಂತಿಗೆ ಬಡಿದು ಅಪಘಾತ ಉಂಟಾಗುವ ಭೀತಿ ಇದೆ. ಬಂಗ್ರಮಂಜೇಶ್ವರದ ಈ ದಾರಿಯಾಗಿ ಕಟ್ಟೆಬಜಾರ್, ಹೊಸಬೆಟ್ಟು, ತಲಪಾಡಿ ಮೊದಲಾದ ಭಾಗಗಳಿಂದ ಹೊಸಂಗಡಿ ಪೇಟೆಗೆ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಈ ತಂತಿಯನ್ನು ತೆರವುಗೊಳಿಸಲು ಸಂಬಂಧಪಟ್ಟ ವಿದ್ಯುತ್ ಇಲಾಖೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.