ತೀರ್ಥಯಾತ್ರೆಗೆ ತೆರಳಿದ್ದ ತಂಡ ಸಂಚರಿಸಿದ್ದ ಟೂರಿಸ್ಟ್ ಬಸ್‌ಗೆ ಬೆಂಕಿ ತಗಲಿ 8 ಮಂದಿ ಮೃತ್ಯು: 20 ಮಂದಿಗೆ ಗಾಯ

ಚಂಡೀಗಢ್: ತೀರ್ಥಯಾತ್ರೆಗೆ ತೆರಳಿದ ತಂಡ ಸಂಚರಿಸುತ್ತಿದ್ದ ಟೂರಿಸ್ಟ್ ಬಸ್‌ಗೆ ಬೆಂಕಿ ತಗಲಿ 8 ಮಂದಿ ಮೃತಪಟ್ಟಿದ್ದಾರೆ. ಹರ್ಯಾಣದ ನೂಹಿಯಲ್ಲಿ ಘಟನೆ ನಡೆದಿದೆ. ಈ ಅಪಘಾತದಿಂದ 20 ಮಂದಿಗೆ ಗಾಯವುಂಟಾಗಿದೆ. ಇಂದು ಮುಂಜಾನೆ 1.30 ವೇಳೆ 60ರಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್‌ಗೆ ದಿಢೀರ್ ಆಗಿ ಬೆಂಕಿ ಹಿಡಿದಿದೆ. ಹೊಗೆ ಮತ್ತು ಬೆಂಕಿ ಕಂಡ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಕೆಲವರು ವಾಹನದಿಂದ ಹಾರಿ ಪಾರಾಗಿದ್ದಾರೆ. ಬೆಂಕಿ ತಗಲಿರುವುದು ಗಮನಕ್ಕೆ ಬಂದ ಓರ್ವ ಬೈಕ್ ಪ್ರಯಾಣಿಕ ಬಸ್ ಚಾಲಕನಿಗೆ ಈ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಬಸ್‌ನ್ನು ನಿಲ್ಲಿಸಿದಾಗ ಬೆಂಕಿ ಬಸ್‌ನ ಅಡಿ ಭಾಗದಿಂದ ಒಳಗೂ ಹರಡಿಕೊಂಡಿದೆ. ದಿಗ್ಭ್ರಮೆಗೊಂಡ ಪ್ರಯಾಣಿಕರು ಅತ್ತಿತ್ತ ಓಡಾಡಿದರು. ಬಸ್‌ನ ಗಾಜನ್ನು ಹುಡಿಮಾಡಿ 10ರಷ್ಟು ಮಂದಿಯನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ದುರಂತ ಸಂಭವಿಸಿದ್ದ ಸ್ಥಳದಲ್ಲಿ ಅಂಗಡಿ ನಡೆಸುತ್ತಿರುವ ಓರ್ವ ತಿಳಿಸಿದ್ದಾರೆ.

ಹೆಚ್ಚಿನವರನ್ನು ರಕ್ಷಿಸುವುದಕ್ಕಿಂತ ಮುಂಚಿತವೇ ಬಸ್‌ನೊಳಗೆ ಪೂರ್ಣವಾಗಿ  ಬೆಂಕಿ ಹರಡಿದೆ. ಕಳೆದ 8 ದಿನದಿಂದ ಈ ತಂಡ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿತ್ತು.

You cannot copy contents of this page