ತೀವ್ರ ಮಳೆ: ರಾಜ್ಯದ 8 ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ

ತಿರುವನಂತಪುರ: ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ 8 ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಕಲ್ಲಿಕೋಟೆ, ಪಾಲಕ್ಕಾಡ್, ಇಡುಕ್ಕಿ, ವಯನಾಡ್, ಆಲಪ್ಪುಳ, ತೃಶೂರು, ಕಣ್ಣೂರು, ಕೋಟ್ಟಯಂ ಜಿಲ್ಲೆಗಳಲ್ಲಿ ಶಾಲೆಗಳಿಗೆ ಇಂದು ರಜೆ. ಆದರೆ ಮಲಪ್ಪುರಂ, ಕಾಸರಗೋಡು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿಲ್ಲ. ಕಲ್ಲಿಕೋಟೆ ಜಿಲ್ಲೆಯ ಅಂಗನವಾಡಿಗಳಿಗೂರಜೆ ಬಾಧಕವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಆದರೆ ಮುಂಚಿತವಾಗಿಯೇ ನಿರ್ಧರಿಸಿದ ಪರೀಕ್ಷೆಗಳಿಗೆ ಬದಲಾವಣೆ ಇಲ್ಲ ಎಂದಿದ್ದಾರೆ. ವಯನಾಡ್ ಜಿಲ್ಲೆಯಲ್ಲಿ ಟ್ಯೂಷನ್ ಸೆಂಟರ್‌ಗಳು, ಅಂಗನವಾಡಿಗಳು, ಪ್ರೊಫೆಶನಲ್ ಕಾಲೇಜುಗಳು ಸಹಿತದ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ರಜೆ ಸಾರಿದ್ದಾರೆ. ಕಣ್ಣೂರು ಜಿಲ್ಲೆಯ ಹೆಚ್ಚಿನ ಪ್ರದೇಶಗಳಲ್ಲಿ ತೀವ್ರ ಮಳೆ ನಿನ್ನೆ ದಾಖಲಾಗಿದೆ. ಗಾಳಿಯ ಶಕ್ತಿ ಹೆಚ್ಚಲಿರುವ ಹಿನ್ನೆಲೆಯಲ್ಲಿ ಅತೀ ತೀವ್ರ ಮಳೆಗಿರುವ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

RELATED NEWS

You cannot copy contents of this page