ತೂಮಿನಾಡು: ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟ; ಸಂಘಶಕ್ತಿ ಮಧೂರು ಪ್ರಥಮ
ಮಂಜೇಶ್ವರ: ತೂಮಿನಾಡು ಅರಬ್ ರೈಡರ್ಸ್ ಕ್ಲಬ್ನ 12ನೇ ವಾರ್ಷಿಕೋತ್ಸವದಂಗವಾಗಿ ಹಮ್ಮಿಕೊಂಡ ರಾಜ್ಯ ಮಟ್ಟದ 16 ತಂಡಗಳನ್ನೊಳಗೊಂಡ ಕೇರಳ ಸೀನಿಯರ್ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಸಂಘಶಕ್ತಿ ಮಧೂರು ಚಾಂಪ್ಯನ್ ಆಗಿದೆ.
ರೆಡ್ ವರ್ಲ್ಡ್ ಕೊಪ್ಪಳ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಎಕೆಜಿ ಆರಾಟಕಡವ್ ತೃತೀಯ ಸ್ಥಾನ, ತೂಮಿನಾಡು ಅರಬ್ ರೈಡರ್ಸ್ ನಾಲ್ಕನೇ ಸ್ಥಾನವನ್ನು ಪಡೆದಿದೆ. ಪಂದ್ಯಾಟವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಅಶ್ರ್ ಸಕ್ಲಿನ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ, ಉಪಾಧ್ಯಕ್ಷ ಮೊಹಮ್ಮದ್ ಸಿದ್ದಿಕ್, ಅಝೀಜ್ ಹಾಜಿ, ಮುಸ್ತಫ ಕಡಂಬಾರು, ದಯಾಕರ ಮಾಡ, ಮುನೀರ್, ಮುಸ್ತಫ ಉದ್ಯಾವರ ಅತಿಥಿಗಳಾಗಿದ್ದರು. ಇಲ್ಯಾಸ್ ತೂಮಿನಾಡು ಸ್ವಾಗತಿಸಿದರು. ಅಬ್ದುಲ್ ಲತೀಫ್ ಬಾಬ, ಸಿದ್ದಿಕ್ ತಂಙಳ್, ಹಾಸಿಕ್, ಅನ್ವರ್, ತನ್ವೀರ್, ಇಸ್ಮಾಯಿಲ್, ತನ್ವೀರ್ ಅಹಮ್ಮದ್, ಸಮೀರ್ ನೇತೃತ್ವ ನೀಡಿದರು. ಇದೇ ವೇಳೆ ರಾಜ್ಯ ಶಾಲಾ ಕ್ರೀಡಾಕೂಟದ ಸಬ್ ಜ್ಯೂನಿಯರ್ ವಿಭಾಗದ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಅಂಗಡಿಮೊಗರು ಶಾಲಾ ವಿದ್ಯಾರ್ಥಿ ನಿಯಾಸ್ ಅಹಮ್ಮದ್, ಐಟಿ ವಿಭಾಗದಲ್ಲಿ ಉತ್ತಮ ಸಾಧನೆಗೈದ ಸಿರಾಜುಲ್ ಹುದಾ ಶಾಲಾ ವಿದ್ಯಾರ್ಥಿ ಅಫ್ತಾಬ್ ಫಯಾಸ್, ಸಮಾಜಸೇವಕ ಇಲ್ಯಾಸ್ ತೂಮಿನಾಡುರನ್ನು ಶಾಸಕ ಎಕೆಎಂ ಅಶ್ರಫ್ ಸನ್ಮಾನಿಸಿದರು.