ತೆಂಗಿನಕಾಯಿ, ಕೋಳಿ ಕಳವುಗೈದ ಪ್ರಕರಣದ ಆರೋಪಿ ಸೆರೆ: ಉಪ್ಪಳದಲ್ಲಿ ಮಾರಾಟಗೈದ ಕೋಳಿ ಪತ್ತೆ

ಕುಂಬಳೆ: ತೋಟದಿಂದ ತೆಂಗಿನಕಾಯಿ ಹಾಗೂ ಗೂಡಿನಲ್ಲಿಟ್ಟು ಸಾಕುತ್ತಿದ್ದ ಕೋಳಿಗಳನ್ನು ಕಳವುಗೈದ ಆರೋಪಿಯನ್ನು ಕುಂಬಳೆ ಪೊಲೀಸರ ಸೆರೆಹಿಡಿದಿದ್ದಾರೆ.

ಕುಬಣೂರು ಕೆದಕ್ಕಾರು ನಿವಾಸಿ ವಿಶ್ವನಾಥ ಕೆ (30) ಎಂಬಾತ ಬಂಧಿತ ಆರೋಪಿಯೆಂದು ಪೊಲೀ ಸರು ತಿಳಿಸಿದ್ದಾರೆ. ಕುಬಣೂರಿನ ಅಬ್ದುಲ್ ಖಾದರ್ ಎಂಬವರ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಬ್ದುಲ್ ಖಾದರ್‌ರ ತೋಟದಿಂದ ಕಳೆದೊಂದು ತಿಂಗಳಲ್ಲಿ ಹಲವು ಬಾರಿಯಾಗಿ ಸುಮಾರು  150 ತೆಂಗಿನಕಾಯಿ ಕಳವಿಗೀಡಾಗಿ ತ್ತೆನ್ನಲಾಗಿದೆ. ಅಲ್ಲದೆ ನವಂಬರ್ ೨೬ರಂದು ರಾತ್ರಿ ಅಬ್ದುಲ್ ಖಾದರ್ ತರವಾಡು ಮನೆಯ ಗೂಡಿನಲ್ಲಿದ್ದ ನಾಲ್ಕು  ಕೋಳಿಗಳು   ಕಳವಿಗೀಡಾಗಿವೆ ಎನ್ನಲಾಗಿದೆ. ಕಳವಿ ಗೀಡಾದ ಕೋಳಿಗಳಿಗೆ ಸುಮಾರು 3600 ರೂಪಾಯಿ ಹಾಗೂ ತೆಂಗಿನಕಾಯಿಗೆ 6750 ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ.    ಕಳವು ಬಗ್ಗೆ ಅಬ್ದುಲ್ ಖಾದರ್  ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋ ದ್ ಕುಮಾರ್, ಎಸ್‌ಐ ಶ್ರೀಜೇಶ್,  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಮನು, ವಿನೋದ್ ನೇತೃತ್ವದ ಪೊಲೀಸರು ತನಿಖೆ ನಡೆಸಿದ್ದರು.

ಕಳವಿಗೀಡಾದ ಕೋಳಿಗಳನ್ನು ಉಪ್ಪಳದ ಕೋಳಿ ಅಂಗಡಿಯಲ್ಲಿ ಮಾರಾಟಗೈದಿರುವ ಬಗ್ಗೆ ಸೂಚನೆ ಲಭಿಸಿತ್ತು. ಇದರಂತೆ ಅಲ್ಲಿನ ಅಂಗಡಿಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವಿಶ್ವನಾಥನ ಕುರಿತು ಮಾಹಿತಿ ಲಭಿಸಿದೆ. ಇದರಂತೆ ಆತನ ನ್ನು ಕಸ್ಟಡಿಗೆ ತೆಗೆದು  ವಿಚಾರಣೆ ನಡೆಸಿದಾಗ ಕೋಳಿ ಕಳವುಗೈದ ಬಗ್ಗೆ ಒಪ್ಪಿಕೊಂಡಿದ್ದಾನೆನ್ನಲಾಗಿದೆ. ಬಂಧಿತ ಆರೋಪಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.  ಇದೇ ವೇಳೆ  ಕಳವು ಆರೋಪಿ ಸೆರೆಗೀಡಾದ ವಿಷಯ ತಿಳಿದುಬಂದ ಹಿನ್ನೆಲೆಯಲ್ಲಿ ೧೦ರಷ್ಟು ಮಂದಿ ಇದೇ ರೀತಿಯ ದೂರುಗಳೊಂದಿಗೆ ಕುಂಬಳೆ ಠಾಣೆಯನ್ನು ಸಮೀಪಿಸಿದ್ದಾರೆ.

RELATED NEWS

You cannot copy contents of this page