ತೆಂಗಿನ ಮರದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ಕಾರ್ಮಿಕ ಮೃತ್ಯು
ಮುಳ್ಳೇರಿಯ: ತೆಂಗಿನ ಮರದಿಂದ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ಮೂಲತಃ ಆದೂರು ಆಲಂತ್ತಡ್ಕ ನಿವಾಸಿ ಪ್ರಸ್ತುತ ಕಾರಡ್ಕ ಅಡ್ಕದಲ್ಲಿ ವಾಸಿಸುತ್ತಿದ್ದ ಸುಂದರ ನಾಯ್ಕ (೫೯) ಮೃತಪಟ್ಟವರು. ಶನಿವಾರ ಬೆಳಿಗ್ಗೆ ಇವರು ತೆಂಗಿನ ಮರದಿಂದ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಪ್ರವೀಣ್, ಸೌಮ್ಯ, ಸಹೋದರರಾದ ಐತ್ತಪ್ಪ ನಾಯ್ಕ್, ಕೃಷ್ಣ ನಾಯ್ಕ್, ಸೋಮಪ್ಪ ನಾಯ್ಕ್, ಸಹೋದರಿಯರಾದ ಲಕ್ಷ್ಮಿ, ಸೀತಾ, ಬಾಲಕ್ಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರರಾದ ಬುದ್ದ ನಾಯ್ಕ್, ಬಾಬು ನಾಯ್ಕ್, ಅಣ್ಣು ನಾಯ್ಕ್ ಈ ಹಿಂದೆ ನಿಧನರಾಗಿದ್ದಾರೆ.