ತ್ಯಾಜ್ಯ ರಾಶಿ ಹಾಕಿ ಕಿಚ್ಚಿಟ್ಟ ಪರಿಣಾಮ ಕಳಿಯೂರಿನಲ್ಲಿ ಹೊಗೆ ಆವರಿಸಿ ಸಮಸ್ಯೆ: ವಾರ್ಡ್ ಸದಸ್ಯನ ನೇತೃತ್ವದಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕದಳ
ಉಪ್ಪಳ: ಖಾಸಗಿ ವ್ಯಕ್ತಿಯ ಹಿತ್ತಿಲಲ್ಲಿ ತ್ಯಾಜ್ಯವನ್ನು ರಾಶಿ ಹಾಕಿ ಕಿಚ್ಚಿಟ್ಟ ಪರಿಣಾಮ ಪರಿಸರ ಪ್ರದೇಶದಲ್ಲಿ ಹೊಗೆ ಆವರಿಸಿ ಕೊಂಡು ಜನರಲ್ಲಿ ಅಸ್ವಸ್ಥತೆ ಸೃಷ್ಟಿಸಿದ್ದು ಕೊನೆಗೆ ಪಂ. ಸದಸ್ಯನ ನೇತೃತ್ವದಲ್ಲಿ ಅಗ್ನಿಶಾ ಮಕದಳ ತಲುಪಿ ಬೆಂಕಿ ನಂದಿಸಲಾಯಿತು.
ಮೀಂಜ ಪಂಚಾಯತ್‌ನ 15ನೇ ವಾರ್ಡ್ ಕಳಿಯೂರಿನಲ್ಲಿ ಖಾಸಗಿ ವ್ಯಕ್ತಿಯೋರ್ವನ ಹಿತ್ತಿಲಲ್ಲಿರುವ ಉಪಯೋಗಶೂನ್ಯ ಕಲ್ಪಣೆಯಲ್ಲಿ ಕಳೆದ ಕೆಲವು ತಿಂಗಳಿಂದ ತ್ಯಾಜ್ಯವನ್ನು ರಾಶಿ ಹಾಕಿದ್ದು, ಕೆಲವು ದಿನಗಳ ಹಿಂದೆ ಅದಕ್ಕೆ ಕಿಚ್ಚಿಡಲಾಗಿತ್ತು. ಇದರ ಪರಿಣಾಮ ಪರಿಸರದಲ್ಲಿ ಹೊಗೆ ಆವರಿಸಿಕೊಂಡಿತ್ತು. ಅದು ನಿನ್ನೆ ಹಗಲು ಹೊತ್ತಿನಲ್ಲಿ ತೀವ್ರಗೊಂಡು ಪರಿಸರ ಪ್ರದೇಶ ಪೂರ್ತಿ ಹೊಗೆ ತುಂಬಿಕೊಂಡಿತ್ತು. ಇದರಿಂದ ಜನರಿಗೆ ಸಮಸ್ಯೆಯಾಗಿ ಕಾಡತೊಡಗಿದೆ. ವಿಷಯ ತಿಳಿದು ವಾರ್ಡ್ ಸದಸ್ಯ ಅಬ್ದುಲ್ ರಜಾಕ್‌ರ ನೇತೃತ್ವದಲ್ಲಿ ಜೆಸಿಬಿ ಹಾಗೂ ಉಪ್ಪಳದಿಂದ ಸೀನಿಯರ್ ಫಯರ್ ಆಫೀಸರ್ ದಯನ್ ನೇತೃತ್ವದಲ್ಲಿ ಅಗ್ನಿಶಾಮಕ ದಳ ತಲುಪಿ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಬೆಂಕಿ ನಂದಿಸಲಾಯಿತು.
ಇದೇ ವೇಳೆ ಕಲ್ಲುಕಡಿದ ಹೊಂ ಡದಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಿದವರು ಯಾರೆಂದು ತಿಳಿದುಬಂದಿಲ್ಲವೆಂದು ಸ್ಥಳೀಯರು ತಿಳಿಸುತ್ತಿದ್ದಾರೆ. ತ್ಯಾಜ್ಯ ಎಸೆದವರ ಹಾಗೂ ಸ್ಥಳದ ಮಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.