ದತ್ತೋಪಂತ್ ಠೇಂಗಡಿಜೀ ಸ್ಮೃತಿ ದಿನಾಚರಣೆ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ ಸ್ಥಾಪಕನಾಗಿರುವ ದಿ| ದತ್ತೋಪಂತ್ ಠೇಂಗಡಿಯವರು ಆದರ್ಶ ಜೀವನದ ಮಾದರಿ ಹಾಗೂ ಕಾರ್ಮಿಕ ಸಮಾಜದ ಸಮಗ್ರ ಕ್ಷೇಮಕ್ಕೆ ಬೇಕಾಗಿ ದುಡಿದ ಕರ್ಮಯೋಗಿ ಎಂದು ಬಿಎಂಎಸ್ ಅಖಿಲ ಭಾರತ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ನುಡಿದರು. ಭಾರತೀಯ ಮಜ್ದೂರ್ ಸಂಘ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಠೇಂಗಡಿ ಜೀ ಸ್ಮೃತಿ ದಿನ ಕಾರ್ಯಕ್ರಮದಲ್ಲಿ ಸಂಸ್ಮರಣೆ ನಡೆಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಬಿಎಂಎಸ್‌ನ ೭೦ನೇ ವರ್ಷದ ಮುಂದಿನ ಯೋಜನೆಗಳ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ವರದಿ ಮಂಡಿಸಿದರು. ಪದಾಧಿಕಾರಿಗಳಾದ ಅನಿಲ್ ಬಿ. ನಾಯರ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್, ಸಿಂಧು ಮಾಯಿಪ್ಪಾಡಿ, ಯಶ್ವಂತಿ, ಲೀಲಾಕೃಷ್ಣನ್, ಗುರುದಾಸ್ ಮಧೂರು, ಸುರೇಶ್ ದೇಳಿ, ಸುನಿಲ್ ವಾಳಕ್ಕೋಡ್, ಅನೂಪ್ ಕೋಳಿಚ್ಚಾಲ್, ಟಿ. ಕೃಷ್ಣನ್, ಎಂ.ಕೆ. ರಾಘವನ್ ಭಾಗವಹಿಸಿದರು. ರಾಜ್ಯ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್ ಸಮಾರೋಪ ಭಾಷಣ ನಡೆಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ಸ್ವಾಗತಿಸಿ, ಉಪಾಧ್ಯಕ್ಷ ಭರತನ್ ವಂದಿಸಿದರು.

RELATED NEWS

You cannot copy contents of this page