ದಾಖಲುಪತ್ರಗಳಿಲ್ಲದೆ ರೈಲಿನಲ್ಲಿ ಸಾಗಿಸುತ್ತಿದ್ದ 35 ಲಕ್ಷ ನಗದು ವಶ: ಓರ್ವ ಕಸ್ಟಡಿಗೆ
ಕಾಸರಗೋಡು: ಸರಿಯಾದ ದಾಖಲುಪತ್ರಗಳಿಲ್ಲದೆ ರೈಲಿನಲ್ಲಿ ಸಾಗಿಸುತ್ತಿದ್ದ 35,49,600 ರೂ.ವನ್ನು ರೈಲ್ವೇ ಪೊಲೀಸ್ ವಿಭಾಗದ ವಿಶೇಷ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬAಧಿಸಿ ಮಂಜೇಶ್ವರ ಪಾವೂರು ನಿವಾಸಿ ಉಮ್ಮರ್ ಫಾರೂಕ್ (41)ಎಂಬಾತನನ್ನು ರೈಲ್ವೇ ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಮಂಗಳೂರು-ಕೊಯA ಬತ್ತೂರು ಎಕ್ಸ್ಪ್ರೆಸ್ ರೈಲಿನಲ್ಲಿ ಈ ನಗದನ್ನು ಸಾಗಿಸಲಾಗುತ್ತಿತ್ತು. ಕಣ್ಣೂರು ರೈಲು ನಿಲ್ದಾಣದ ಠಾಣಾಧಿಕಾರಿ ಪಿ. ವಿಜೇಶ್, ಎಸ್ಐ ಗಳಾದ ಸುನಿಲ್ ಕುಮಾರ್, ರಾಜನ್ ಕೊಟ್ಟಮಲೆಯವರ ನೇತೃತ್ವದಲ್ಲಿ ಇತರ ಪೊಲೀಸರಾದ ವಿನಯ್ ಕುಮಾರ್, ಎಸ್. ಸಂಗೀತ್, ಎಸ್.ಕೆ. ಬಿಜು, ಪಿ.ಬಿ. ಜೋಸ್, ಕೆ. ನಿಖಿಲ್ ಮತ್ತು ಸುಮೇಶ್ ಎಂಬಿವರನ್ನೊಳ ಗೊಂಡ ವಿಶೇಷ ಪೊಲೀಸರ ತಂಡ ಈ ರೈಲಿನಲ್ಲಿ ನಿನ್ನೆ ಕಾಸರಗೋಡಿನಿಂದ ಮಂಗಳೂರು ತನಕ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಲು ಪತ್ತೆಹಚ್ಚಿ ವಶಪಡಿಸಲಾಗಿದೆ.