ದಾರುನ್ನಜಾತ್ 15ನೇ ವಾರ್ಷಿಕ ಸಮ್ಮೇಳನ 10ರಿಂದ
ಮಂಜೇಶ್ವರ: ಚೀನಾಲ ದಾರುನ್ನಜಾತ್‌ನ 15ನೇ ವಾರ್ಷಿಕ ಸಮ್ಮೇಳನ ಈ ತಿಂಗಳ 10, 11ರಂದು ಚಿಗುರುಪಾದೆ ಸಿಎಂ ನಗರದಲ್ಲಿರುವ ಕ್ಯಾಂಪಸ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪದಾಧಿಕಾರಿ ಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ೧೦ರಂದು ಮಧ್ಯಾಹ್ನ 1.30ಕ್ಕೆ ಸ್ವಾಗತಸಮಿತಿ ಅಧ್ಯಕ್ಷ ಎಂ.ಕೆ. ಮೊಹಮ್ಮದ್ ಹಾಜಿ ಕಂಚಿಲ ಧ್ವಜಾರೋಹಣ ಗೈಯ್ಯುವರು. ಬಳಿಕ ಏರ್ವಾಡಿ ಮೌಲೀದಿನ್ ಶಂಸುದ್ದೀನ್ ತಂಙಳ್ ಗಾಂಧೀನಗರ ನೇತೃತ್ವ ನೀಡುವರು. ಸಂಜೆ ೪ಕ್ಕೆ ನಡೆಯುವ ಸಮ್ಮೇಳನವನ್ನು ಸಿಟಿಎಂ ಕುಂಞಿಕೋಯ ತಂಙಳ್ ಮುಡಿಪು ಉದ್ಘಾಟಿಸುವರು. ಮಾಮು ಅಡ್ಕಾಂದರಕ್ಕಾಡ್ ಅಧ್ಯಕ್ಷತೆ ವಹಿಸುವರು. ಹಬೀಬ್ ರಹ್ಮಾನ್ ತಂಙಳ್ ಇರಿಕ್ಕೂರ್ ಪ್ರಾರ್ಥನೆ ನಡೆಸುವರು. ಆಶಿಕ್ ಸಖಾಫಿ ಬೆಜ್ಜಂಗಳ ಪ್ರವಚನ ನೀಡುವರು. ಹಲವರು ಭಾಗವಹಿಸುವರು.
ಸಂಜೆ 6.30ಕ್ಕೆ ಜಲಾಲಿಯ ರಾತೀಬ್‌ಗೆ ಶಿಹಾಬುದ್ದೀನ್ ತಂಙಳ್ ಮದ್ಕ ನೇತೃತ್ವ ನೀಡುವರು. ಶಬೀರ್ ಅಶ್ಹರಿ ಪ್ರಧಾನ ಭಾಷಣ ಮಾಡುವರು. 11ರಂದು ಬೆಳಿಗ್ಗೆ ಮೌಲೀದ್‌ಗೆ ಅಬ್ದುಲ್ ಖಾದರ್ ಸಖಾಫಿ ನೇತೃತ್ವ ನೀಡುವರು. ಅಪರಾಹ್ನ 3 ಗಂಟೆಗೆ ಜಲಾಲುದ್ದೀನ್ ಜಮಾಲುಲೈಲಿ ತಂಙಳ್ ಪಾತೂರು ಸಂಗಮವನ್ನು ಉದ್ಘಾಟಿಸುವರು. ಅಬ್ದುಲ್ ರಶೀದ್ ಕಟ್ಟಪ್ಪಾಡಿ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಸಖಾಫಿ, ಎಂ.ಕೆ. ಮೊಹಮ್ಮದ್ ಹಾಜಿ, ಎಸ್.ಎಂ. ಬಶೀರ್, ಶಬೀರ್, ಅಬ್ದುಲ್ಲ ಭಾಗವಹಿಸಿದರು.