ದುರಂತಕ್ಕೂ ಮೊದಲು ಎಚ್ಚರಕ್ಕೆ ಆಗ್ರಹ: ಮೊಗ್ರಾಲ್ ಸೇತುವೆ ಜೀರ್ಣ ಸ್ಥಿತಿಯಲ್ಲಿ

ಮೊಗ್ರಾಲ್: ನೂರಾರು ವಾಹನಗಳು ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮೊಗ್ರಾಲ್ ಸೇತುವೆ ಅಪಾಯಕರ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಜೀರ್ಣಗೊಂಡ ಈ ಸೇತುವೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಪರಿಶೀಲಿಸಬೇಕೆಂದು ಮೊಗ್ರಾಲ್ ದೇಶೀಯವೇದಿಯು ಆಗ್ರಹಿಸಿದೆ.

ಮಳೆ ಆರಂಭಗೊಂಡ ಬಳಿಕ ಡಾಮರು ಎದ್ದುಹೋಗಿ, ಕಾಂಕ್ರೀಟ್ ಉದುರಿ, ಮಳೆನೀರು ಕಟ್ಟಿ ನಿಂತು ಸೇತುವೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿವೆ. ಇದರಿಂದಾಗಿ ಈ ಸೇತುವೆ ಮೂಲಕ ಸಂಚಾರ ದುಸ್ತರವಾಗಿದೆ. ಸೇತುವೆಯ ಮೂಲಕ ಸರಕು ಸಾಗಾಟದ ಬೃಹತ್ ವಾಹನಗಳು ಸಾಗುವಾಗ ಶಬ್ಧ ಹಾಗೂ ನಡುಕ ಉಂಟಾಗುತ್ತಿರುವುದಾಗಿ ಪ್ರಯಾಣಿಕರು ಮತ್ತು ಚಾಲಕರು ನುಡಿಯುತ್ತಾರೆ. ವಿವಿಧ ಕಡೆಗಳಲ್ಲಿ ಹಲವು ರೀತಿಯ ದುರಂತಗಳು ಸಂಭವಿಸುತ್ತಿರುವ ಮಧ್ಯೆ ಶೋಚನೀಯಾವಸ್ಥೆಯಲ್ಲಿರುವ ಈ ಸೇತುವೆಯನ್ನು ಪರಿಶೀಲಿಸಿ ತುರ್ತು ಕ್ರಮ ಕೈಗೊಂಡು ಸಂಭವನೀಯ ದುರಂತವನ್ನು ತಪ್ಪಿಸಬೇಕೆಂದು ಮೊಗ್ರಾಲ್ ದೇಶೀಯವೇದಿ ಆಗ್ರಹಿಸಿದೆ.

ಇಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page