ದುರಂತ ಭೂಮಿಯಾದ ವಯನಾಡು:  ಸಾವಿನ ಸಂಖ್ಯೆ 150ಕ್ಕೂ ಹೆಚ್ಚು

ಕಲ್ಪೆಟ್ಟ: ಇಡೀ ರಾಜ್ಯವನ್ನೇ ನಡುಗಿಸಿದ ವಯನಾಡಿನಲ್ಲಿ ನಿನ್ನೆ ಮುಂಜಾನೆ ಉಂಟಾದ ಅತೀ ಭೀಕರ ಭೂಕುಸಿತದಿಂದ ಈತನಕ ೧೫೪ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. 240ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ಪಂಚಾಯತ್‌ನಲ್ಲಿ  ನೋಂದಾಯಿಸಲ್ಪಟ್ಟ 400ರಷ್ಟು ಮನೆಗಳ ಪೈಕಿ ಕೇವಲ 20 ಮನೆಗಳು ಮಾತ್ರವೇ ಬಾಕಿ ಉಳಿದುಕೊಂಡಿವ. ಬಾಕಿ 380 ಮನೆಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಆದ್ದರಿಂದ  ಈ ಮನೆಗಳಲ್ಲಿ  ವಾಸವಾಗಿರುವವರಿಗೆ ಏನಾಗಿದೆ? ಅವರಲ್ಲಿ ಎಷ್ಟು ಮಂದಿ   ನಾಪತ್ತೆಯಾಗಿದ್ದಾರೆ ಎಂಬುವುದು ಪ್ರಶ್ನಾರ್ಥಕ ವಿಷಯವಾಗಿ ಮುಂದುವರಿಯುತ್ತಿದೆ. ಇವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ. ಇದಕ್ಕಾಗಿ  ಹೆಚ್ಚುವರಿ ಕೇಂದ್ರ ಪಡೆಯೂ ವಯನಾಡಿಗೆ ಆಗಮಿಸಿದೆ.  ಮನೆಗಳು ಮಾತ್ರವಲ್ಲ ದೇವಸ್ಥಾನಗಳು, ಇಗರ್ಜಿಗಳು ಹಾಗೂ ಮಸೀದಿಗಳೂ ಮಣ್ಣಿನಡಿ ಸಿಲುಕಿಕೊಂಡಿವೆ. ಮಣ್ಣಿನಡಿ ಸಿಲುಕಿಕೊಂಡಿರುವವರಲ್ಲಿ ಇನ್ನೂ ಜೀವಂತವಾಗಿರುವವರನ್ನು ರಕ್ಷಿಸಲು  ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ ನುರಿತ ತರಬೇತಿ ಪಡೆದ ಶ್ವಾನಗಳನ್ನು  ಬಳಸಲಾಗುತ್ತಿದೆ.  ದುರಂತ ಎಷ್ಟು ಭೀಕರವಾಗಿದೆಯೆಂದರೆ ಅಲ್ಲಿನ ನದಿಗಳಲ್ಲಿ ಮೃತದೇಹಗಳು ಸಮೀಪದ ಮಲಪ್ಪುರಂ ಜಿಲ್ಲೆಗೆ ತೇಲಿ ಬರುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಗೋಚರಿಸತೊಡಗಿವೆ. ದುರಂತ ತಾಂಡವವೆಸಗಿದ ಪ್ರದೇಶಗಳ ಮಣ್ಣು ಮತ್ತು ಕಲ್ಲುಬಂಡೆಗಳ ರಾಶಿಗಳಲ್ಲಿ ಕನಿಷ್ಠ ಗುರುತುಹಚ್ಚಲು ಸಾಧ್ಯವಾಗದ ರೀತಿಯಲ್ಲಿ  ಹಲವು ಮೃತದೇಹಗಳು ಪತ್ತೆಯಾಗತೊಡಗಿವೆ. ಇಡೀ ಚೂರಲ್‌ಮಲ ಪಟ್ಟಣವೇ ಬಹುತೇಕ ನಿರ್ನಾಮಗೊಂಡಿದೆ.  ಪತ್ತೆಯಾದ ಮೃತದೇಹಗಳ ತುರ್ತು ಮರಣೋತ್ತರ ಪರೀಕ್ಷೆಗಾಗಿ  ಅಲ್ಲೇ ಸಮೀಪದಲ್ಲಿ ತಾತ್ಕಾಲಿಕವಾದ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.  ಹೀಗೆ ಬಂದು ಸೇರಿರುವ  154ರಷ್ಟು ಮೃತದೇಹಗಳ ಪೈಕಿ ೮೦ ಮೃತದೇಹಗಳನ್ನು ಮಾತ್ರವೇ ಈತನಕ ಗುರುತುಹಚ್ಚಲು ಸಾಧ್ಯವಾಗಿದೆ.  ಆಸ್ಪತ್ರೆಗಳಲ್ಲಿ  ಮೃತ ವ್ಯಕ್ತಿಗಳ  ಸಂಬಂಧಿಕರ ರೋಧನೆ ಮುಗಿಲುಮುಟ್ಟತೊಡಗಿದೆ.

  ಭೂ ಕುಸಿತದಿಂದ ನಾಶಗೊಂಡ ಸೇತುವೆಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸೇತುವೆ ನಿರ್ಮಾಣಕ್ಕೆ ಅಗತ್ಯವುಳ್ಳ ಭಾಗಗಗಳನ್ನು ಹೆಲಿಕಾಪ್ಟರ್ ಹಾಗೂ ವಾಹನಗಳಲ್ಲಿ ತಲುಪಿಸಲಾಗುವುದು. 85 ಅಡಿ ಉದ್ದದ ಸೇತುವೆಯನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗುವುದು. ಈ ಸೇತುವೆ ಮೇಲೆ ಸಣ್ಣ ಪುಟ್ಟ ವಾಹನಗಳಿಗೆ ಸಂಚರಿಸಬಹುದಾಗಿದೆ. 

ರಕ್ಷಣಾ ಕಾರ್ಯಾಚರಣೆ ಇನ್ನೂ ಕೆಲವು ದಿನಗಳ ತನಕ ಮುಂದು ವರಿಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You cannot copy content of this page