ದೇಶದಲ್ಲಿ ಎಟಿಎಂಗಳ ಸಂಖ್ಯೆ ಇಳಿಕೆ
ಕಾಸರಗೋಡು: ದೇಶದಲ್ಲಿ ಬ್ಯಾಂಕ್ ಎಟಿಎಂಗಳ ಸಂಖ್ಯೆ ಈಗ ಇಳಿಯ ತೊಡಗಿದೆಯೆಂದುಕೇAದ್ರ ಸಂಸದೀಯ ಸಚಿವಾಲಯ ವರದಿಗಳು ಸೂಚಿಸುತ್ತಿವೆ.
ನಗರ, ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾದ ರೀತಿಯಲ್ಲಿ ಎಟಿಎಂ ಕೇಂದ್ರಗಳ ಸಂಖ್ಯೆ ಇಳಿಯತೊಡಗಿದೆ. 2019ರಲ್ಲಿ ದೇಶದ ಒಟ್ಟು ಎಟಿಎಂಗಳ ಸಂಖ್ಯೆ 2,27,886ರಷ್ಟಿತ್ತು. 2024ರಲ್ಲಿ ಆ ಸಂಖ್ಯೆ 255078ಕ್ಕೇರಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಒಟ್ಟಾರೆ ಲೆಕ್ಕಾ ಚಾರದಲ್ಲಿ ಎಟಿಎಂಗಳ ಸಂಖ್ಯೆಯಲ್ಲಿ 11.90ರಷ್ಟು ಏರಿಕೆ ಉಂಟಾಗಿದೆ. ನಂತರ ಎಟಿಎಂಗಳ ಸಂಖ್ಯೆಯಲ್ಲಿ 2868ರಷ್ಟು ಇಳಿಕೆಯುಂಟಾಗಿದೆ. ಅಂದರೆ ಶೇ. 1.10ರಷ್ಟು ಕುಸಿತವುಂ ಟಾಗಿದೆ. ದೇಶದಲ್ಲಿ ಯುಪಿಐ ವ್ಯಾಪಕಗೊಳ್ಳತೊಡಗಿರುವುದೇ ಎಟಿಎಂ ಕೇಂದ್ರಗಳ ಸಂಖ್ಯೆ ಇಳಿಯಲು ಕಾರಣವಾಗಿದೆಯೆಂದು ಸಚಿವಾಲ ಯದ ವರದಿಯಲ್ಲಿ ತಿಳಿಸಲಾಗಿದೆ. ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಗಳೂ ಎಟಿಎಂ ಸಂಖ್ಯೆ ಇಳಿಯಲು ಇನ್ನೊಂದು ಕಾರಣವಾಗಿದೆಯೆಂದು ವರದಿಯಲ್ಲಿ ಹೇಳಲಾಗಿದೆ.