ದೇಶದ ಒಳಗಿನ, ಹೊರಗಿನ ಭೀತಿವಾದ ಬೆದರಿಕೆಗಳನ್ನು ದೇಶ ಒಗ್ಗಟ್ಟಾಗಿ ಸೋಲಿಸಬೇಕು- ಸಚಿವ ಗಣೇಶ್ ಕುಮಾರ್: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಚಿವರಿಂದ ಧ್ವಜ ವಂದನೆ ಸ್ವೀಕಾರ

ಕಾಸರಗೋಡು:  ದೇಶದ ಒಳಗಿನ, ಹೊರಗಿನ ಭೀತಿವಾದ ಬೆದರಿಕೆಗಳನ್ನು ದೇಶ ಒಗ್ಗಟ್ಟಾಗಿ ಸೋಲಿಸಬೇಕೆಂದು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ನುಡಿದರು. ವಿದ್ಯಾನಗರ ನಗರಸಭಾ ಮೈದಾನದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಧ್ವಜ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.  ದೇಶದಲ್ಲಿ ಪರಿಶಿಷ್ಟ ಬುಡಕಟ್ಟು ವಿಭಾಗದವರ ಸಹಿತವಿರುವ ಹಿಂದುಳಿದ ವಿಭಾಗಗಳನ್ನು ಸಮಾಜದ ಮುಂಚೂಣಿಗೆ ತರುವುದಕ್ಕೆ ಎಲ್ಲರೂ ಒಂದಾಗಿ ಪ್ರಯತ್ನಿಸಬೇಕು. ಇಂದು ನಮ್ಮ ಸಮೂಹದಲ್ಲಿ ಹಿಂದುಳಿದಿರುವ ಅದೆಷ್ಟೋ ವ್ಯಕ್ತಿಗಳಿದ್ದಾರೆ. ಅವರನ್ನು ಸಮೂಹದ ಮುಂಚೂಣಿಗೆ  ತರುವುದಕ್ಕೆ ಭಾರತೀಯರು ಲೋಪದೋಷವಿಲ್ಲದೆ ಪ್ರಯತ್ನಿಸಬೇಕೆಂದು ಅವರು ನುಡಿದರು. ಭಾರತವನ್ನು ದೇಶದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ  ಬೆಳೆಸಲಾಗಿದೆ.  200ಕ್ಕೂ ಅಧಿಕ ವರ್ಷ ನೆಲೆಗೊಂಡಿದ್ದ ಗುಲಾಮತನದಿಂದ ವಿಮೋಚನೆ ಗೊಳಿಸಿದ ನಾವು ಅಲ್ಲಿಂದ ಒಂದಷ್ಟು ದೂರ ಸಂಚರಿಸಲು ಸಾಧ್ಯವಾಗಿದೆ. ಇನ್ನು ಕೂಡಾ ಬಹುದೂರ ಸಾಗಬೇಕಾಗಿದ್ದು, ಆ ಪ್ರಯಾಣದಲ್ಲಿ ನಾವು  ಎತ್ತಿಹಿಡಿಯಬೇಕಾಗಿರುವುದು ಹಿಂದುಳಿದವರನ್ನು ಮುಂಚೂಣಿಗೆ ತರುವ ಪ್ರಯತ್ನಗಳಾಗಿವೆ ಎಂದರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಎಂಬಿವರು ಪರೇಡ್‌ನಲ್ಲಿ ವಂದನೆ ಸ್ವೀಕರಿಸಿದರು.  ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್. ಎಕೆಎಂ. ಅಶ್ರಫ್, ಎಂ. ರಾಜಗೋಪಾಲ್,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಸ್ವಾತಂತ್ರ್ಯ ಹೋರಾಟಗಾರ ಕ್ಯಾ| ಕೆ.ಎಂ.ಕೆ. ನಂಬ್ಯಾರ್, ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಭಾಗವಹಿಸಿದರು. ವಿವಿಧ ವಲಯಗಳಲ್ಲಿ ಸಾಧನೆಮಾ ಡಿದ ಹಿರಿಯ ವ್ಯಕ್ತಿತ್ವಗಳನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page