ದೈಹಿಕ ಶಿಕ್ಷಕ ಸಂಘಟನೆಯ ಜಿಲ್ಲಾ ಸಮ್ಮೇಳನ

ಕಾಸರಗೋಡು: ಜಿಲ್ಲಾ ಶಾಲಾ ದೈಹಿಕ  ಶಿಕ್ಷಕ ಸಂಘಟನೆಯ ಜಿಲ್ಲಾ ಸಮ್ಮೇಳನ ಕಾಸರಗೋಡಿನಲ್ಲಿ  ಜರಗಿತು. ಎಲ್ಲಾ ಶಾಲೆಗಳಲ್ಲಿ ಶಾರೀರಿಕ ಶಿಕ್ಷಕರನ್ನು ನೇಮಿಸಬೇಕು, ಹೈಸ್ಕೂಲ್ ವೇತನವನ್ನು ನೀಡಬೇಕು. ಸರಕಾರಕ್ಕೆ ನೀಡಿರುವ ಖಾದರ್  ಸಮಿತಿಯ ವರದಿಯನ್ನು ಮರುಪರಿಶೀಲನೆ ಮಾಡಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.   ಕಾಸರಗೋಡು  ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಖಜಾಂಚಿ ಕೆ. ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಶಶಿಕಾಂತ ಜಿ ಆರ್, ಮಧುಸೂದನ, ಪ್ರೀತಿ ಮೋಳ್, ಅಬ್ದುಲ್ ಶುಕೂರ್, ಶಫೀಲ್ ಶುಭಕೋರಿದರು. ಸೇವೆಯಿಂದ ನಿವೃತ್ತರಾಗಲಿರುವ ಕೆ. ಸೂರ್ಯನಾರಾಯಣ ಭಟ್, ವಿಶ್ವನಾಥ ಭಟ್, ಶಿವಪ್ರಸಾದ್, ಬಾಬು ಥೋಮಸ್, ವೆಂಕಟ್ರಮಣ ಭಟ್, ಶಶಿಕಾಂತ ಜಿ.ಆರ್. ಗೋಪಾಲಕೃಷ್ಣ ಭಟ್, ತಂಗಮಣಿ, ಮಧುಸೂದನ ಇವರನ್ನು ಗೌರವಿಸಲಾಯಿತು. ಬಾಲಕೃಷ್ಣ ಶೆಟ್ಟಿ, ಶ್ಯಾಮ ಪ್ರಕಾಶ್ ಭಟ್, ಅನಿತಾ, ಧನೇಶ್  ಕುಮಾರ್, ಕೆ.ಎಂ. ಬಲ್ಲಾಳ್, ಅಶೋಕನ್ ಲಕ್ಷ್ಮಣ ಶುಭಹಾರೈಸಿದರು.

You cannot copy contents of this page