ಧರ್ಮತ್ತಡ್ಕದಲ್ಲಿ ಉಪಜಿಲ್ಲಾ ಶಾಲಾ ಕಲೋತ್ಸವ ವಿವಿಧ ಸಮಿತಿಗಳ ಸಮಾಲೋಚನಾ ಸಭೆ

ಧರ್ಮತ್ತಡ್ಕ; ನವಂಬರ್ ೭ರಿಂದ ೧೦ರ ವರೆಗೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ೬೨ ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ರೂಪುಗೊಂಡ ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಇಲ್ಲಿನ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಅಧ್ಯಕ್ಷತೆ ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಕೈಜೋಡಿಸಬೇಕೆಂದು ಕೋರಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಮಾತನಾಡಿ ಸರ್ವರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಿದರು. ಪ್ರೋಗ್ರಾಂ ಕಮಿಟಿಯ ಕನ್ವೀನರ್ ಸತೀಶ್ ಕುಮಾರ್ ಶೆಟ್ಟಿ, ಫುಡ್ ಕಮಿಟಿ ಕನ್ವೀನರ್ ರಾಜಕುಮಾರ್ ಕೆ , ರಿಸೆಪ್ಷನ್ ಸಮಿತಿ ಕನ್ವೀನರ್ ಉಷಾ ಕೆ.ಆರ್, ಫೈನಾನ್ಸ್ ಸಮಿತಿ ಕನ್ವೀನರ್ ರಾಮಮೋಹನ್ ಸಿ.ಎಚ್, ಸ್ಟೇಜ್ ಲೈಟ್ ಹಾಗೂ ಸೌಂಡ್ಸ್ ಸಮಿತಿ ಕನ್ವೀನರ್ ಪ್ರಶಾಂತ ಹೊಳ್ಳ, ಡಿಸಿಪ್ಲಿನ್ ಸಮಿತಿ ಕನ್ವೀನರ್ ಉಣ್ಣಿಕೃಷ್ಣನ್, ಟ್ರೋಫಿ ಕಮಿಟಿ ಕನ್ವೀನರ್ ಶಿವಪ್ರಸಾದ್ ಸಿ, ಪಬ್ಲಿಸಿಟಿ ಸಮಿತಿ ಕನ್ವೀನರ್ ಪ್ರದೀಪ್ ಕೆ ಹಾಗೂ ಹೆಲ್ತ್ ಹಾಗೂ ಸಾನಿಟೈಸೇಶನ್ ಸಮಿತಿ ಕನ್ವೀನರ್ ರಾಮಕೃಷ್ಣ ಭಟ್ ಹೀಗೆ ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ ೯ ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಎಚ್.ಎಂ ಫೋರಂ ಸೆಕ್ರೆಟರಿ ಶಾಮ ಭಟ್, ಸಹ ಕಾರ್ಯದರ್ಶಿ ಸತ್ಯಪ್ರಕಾಶ್, ಸ್ಥಳೀಯ ವೈದ್ಯಾಧಿಕಾರಿ ಡಾ.ಸೀತಾ ರತ್ನ ,ಹೈಸ್ಕೂಲ್ ಹಾಗೂ ಯುಪಿ ಶಾಲೆಗಳ ಪಿ.ಟಿ.ಎ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಅಶೋಕ, ಎಂ.ಪಿ.ಟಿ ಎ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಪಂ. ಸದಸ್ಯರಾದ ಅಶೋಕ ಭಂಡಾರಿ, ಶಾಂತಿ ವೈ, ಗಂಗಾಧರ್, ಪಾಲಾಕ್ಷ, ಯು.ಪಿ ಶಾಲಾ ವ್ಯವಸ್ಥಾಪಕಿ ವಿಜಯಶ್ರೀ ಉಪಸ್ಥಿತರಿದ್ದರು. ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಭಟ್ ಪ್ರಾರ್ಥಿಸಿದರು. ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್ ವಂದಿಸಿದರು. ಶ್ರೀನಿವಾಸ್ ಕೆ.ಎಚ್ ನಿರೂಪಿಸಿದರು.

RELATED NEWS

You cannot copy contents of this page