ಉಪ್ಪಳ: ಮಂಗಲ್ಪಾಡಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಎ ಗ್ರೇಡ್ ಗಳಿಸಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಇವರ ‘ಮರಣ ಮನೆ’ ನಾಟಕವನ್ನು ಸದಾಶಿವ ಬಾಲ ಮಿತ್ರ ರಚಿಸಿ ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಗಳಾದ ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಪ್ರೀತಿಕಾ, ಸ್ತುತಿ ಎಂ, ಶಮಿಕ, ಪವನ್ ರಾಮ್, ತನ್ವಿತ್ ಕೆ, ಹರ್ಷಿತ್ ಬಲ್ಲಾಳ್, ಅಫ್ಲಾಹ ಪಿ, ಸಹನಾ ಭಾಗವಹಿಸಿದ್ದರು. ನೂತನ್ ಎಡಕ್ಕಾನ ಉತ್ತಮ ನಟನಾಗಿ ಆಯ್ಕೆಯಾದನು. ಅಧ್ಯಾಪಕರಾದ ವಸಂತ ಮೂಡಂಬೈಲ್, ಪ್ರಕಾಶ್ ಕುಂಬಳೆ, ಶಿವಪ್ರಸಾದ್ ಚೆರುಗೋಳಿ, ರಾಜ್‌ಕುಮಾರ್ ಕೆ, ಪ್ರಶಾಂತ್ ಹೊಳ್ಳ ಎನ್, ಪ್ರದೀಪ್ ಕೆ, ಅಭಿಲಾಷ್ ಪೆರ್ಲ, ಹರ್ಷಿತ್ ಐಲ್ ಸಹಕರಿಸಿದರು.
