ಧಾರ್ಮಿಕ ಕೇಂದ್ರಗಳು ಬೆಳೆದಾಗ ಸಮಾಜ ಸದೃಢ- ಎಡನೀರು ಶ್ರೀ
ಮೀಯಪದವು: ಧಾರ್ಮಿಕ ಕೇಂದ್ರ ಗಳು ಬೆಳೆದಾಗ ಸಮಾಜ ಸದೃಢವಾಗು ವುದು. ತ್ಯಾಗ ಎಲ್ಲಿದೆಯೋ ಅಲ್ಲಿ ಭಕ್ತಿಯು ನೆಲೆಸುವುದು ಎಂದು ಎಡ ನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಯುವಕರು ಜಾಗೃತರಾದರೆ ದೇಶ ಬೆಳಗಿದಂತೆ. ಮಾನವೀಯ ಮೌಲ್ಯಗಳು ಧಾರ್ಮಿಕ ಕೇಂದ್ರಗಳನ್ನು ಎತ್ತಿಹಿಡಿಯುತ್ತದೆ ಎಂದು ನುಡಿದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿ ಕುಡುಪು, ಬ್ರಹ್ಮಶ್ರೀ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆ, ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದರು. ಆಡಳಿತ ಟ್ರಸ್ಟ್‌ನ ಅಧ್ಯಕ್ಷ ಡಾ. ಶ್ರೀಧರ ಭಟ್ ಅಧ್ಯಕ್ಷತೆ ವಹಿಸಿದರು. ಶಂಕರನಾರಾಯಣ ಭಟ್ ಬಜಾಲ್, ಶಂಕರ್ ರೈ ಮಾಸ್ತರ್, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪ್ರವೀಣ್ ಕುಮಾರ್, ಸೂರ್ಯಕಾಂತ್ ಜಯ ಸಿ. ಸುವರ್ಣ, ಜಯರಾಮ ಬಲ್ಲಂಗುಡೇಲು, ಅಶೋಕ್ ಎಂ.ಸಿ, ಶ್ರೀಧರ ಶೆಟ್ಟಿ ಮುಟ್ಟಂ, ಸತೀಶ ಶೆಟ್ಟಿ ಕುಡಾಲು, ಎಸ್.ಎನ್. ಕಡಂಬಾರು, ವಿಶ್ವನಾಥ ಶೆಟ್ಟಿ ಕುಂಜತ್ತೂರು, ಕೃಷ್ಣ ಶಿವಕೃಪ ಕುಂಜತ್ತೂರು, ಶಶಿಧರ ಶೆಟ್ಟಿ ಜಮ್ಮದ ಮನೆ, ಬಾಲಕೃಷ್ಣ ಭಂಡಾರಿ ದಡ್ಡಂಗಡಿ ಉಪಸ್ಥಿತರಿದ್ದರು. ಇದೇ ವೇಳೆ ನರಸಿಂಹ ತಂತ್ರಿ ಕುಡುಪು, ನಾರಾಯಣ ರಾವ್, ಕೃಷ್ಣ ಹೊಳ್ಳ, ತ್ಯಾಂಪಣ್ಣ ಶೆಟ್ಟಿ ಅಂಗಡಿದಾರು, ವಸಂತಿ ಅಪ್ಪಯ್ಯ ಪೂಂಜ, ಬಾಲಕೃಷ್ಣ ಭಂಡಾರಿ, ರಾಜೇಶ್ ಮಾರು ಇವರನ್ನು ಗೌರವಿಸಲಾಯಿತು.