ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರದಿಂದ ಧಾರ್ಮಿಕ ನಂಬಿಕೆಗಳು ಗಟ್ಟಿಗೊಳ್ಳುತ್ತಿವೆ-ಎಡನೀರು ಶ್ರೀ
ಅಡೂರು: ಊರಿನ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಬ್ರಹ್ಮಕಲ ಶೋತ್ಸವದ ಮೂಲಕ ಧಾರ್ಮಿಕ ನಂಬಿಕೆಗಳು ಗಟ್ಟಿಗೊಳ್ಳುತ್ತಿವೆ. ಕೌಂಡಿಕ್ಕಾನ ಯಾತ್ರೆ ಎಂಬ ಧಾರ್ಮಿಕ ಪ್ರಕ್ರಿಯೆ ಒಂದು ಸೌಭಾಗ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಅವರು ನಿನ್ನೆ ಅಡೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇಗುಲದ ಜೀರ್ಣೋದ್ಧಾರ ಸಮಿತಿ ನೇತೃತ್ವದಲ್ಲಿ ಮಕರ ಸಂಕ್ರಮಣ ದಿನ ನಡೆಯಲಿರುವ ಕೌಂಡಿಕ್ಕಾನ ಯಾತ್ರೆಯ ಪೂರ್ವಭಾವಿಯಾಗಿ ನಿನ್ನೆ ನಡೆದ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಬ್ರಹ್ಮಶ್ರೀ ವೇಸುದೇವ ಕುಂಟಾರು ಕೌಂಡಿಕ್ಕಾನ ಯಾತ್ರೆ ಸಂದರ್ಭದಲ್ಲಿ ವ್ರತಾಚರಣೆ ನಡೆಸಬೇಕಾಗಿದ್ದು ಮೂಲಸ್ಥಾನದಿಂದ ಪ್ರಸಾದ ತರಬೇಕಾಗಿದ್ದರೆ ಎಲ್ಲರ ಪ್ರಾರ್ಥನೆ ಅಗತ್ಯ ಎಂದು ನುಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೃಷ್ಣಪ್ರಸಾದ್ ರೈ ಕುತ್ತಿಕ್ಕಾರು, ಸುರೇಶ್ ಮುಖ್ಯ ಅತಿಥಿಗಳಾಗಿದ್ದರು. ಗೋಪಾಲಕೃಷ್ಣ ಶೆಟ್ಟಿ, ಮಂಜುನಾಥ ಆಳ್ವ, ಅಶೋಕ್ ಕುರ್ನೂರು, ರಾಧಾಕೃಷ್ಣ ಬಾರಿತ್ತಾಯ, ರಾಮಚಂದ್ರ ಮಣಿಯಾಣಿ, ಶ್ರೀಪತಿ ಉಪಸ್ಥಿತರಿದ್ದರು. ರಾಜೇಶ್ ಟಿ ಲೆಕ್ಕಪತ್ರ ಮಂಡಿಸಿ, ರವಿನಾರಾಯಣ ಮಿತ್ತೊಟ್ಟಿ ವರದಿ ವಾಚಿಸಿದರು.
ಪ್ರತಿಮಾ ಬಾರಿತ್ತಾಯ, ಅನನ್ಯ ಬಾರಿತ್ತಾಯ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ಪೆರಿಯಡ್ಕ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಗಂಗಾಧರ ಕಾಂತಡ್ಕ ವಂದಿಸಿದರು. ಕೃಷ್ಣಪ್ಪ ಮಾಸ್ತರ್, ಸದಾಶಿವ ರೈ ಬೆಳ್ಳಿಪ್ಪಾಡಿ ನಿರೂಪಿಸಿದರು. ಬಲಿವಾಡುಕೂಟ ಏರ್ಪಡಿಸಲಾಯಿತು.