ನಗರಸಭಾ ಕಾರ್ಯದರ್ಶಿಗೆ ಹಲ್ಲೆ ನಡೆಸಿದ ಪ್ರಕರಣ: ಇನ್ನೋರ್ವ ಸೆರೆ
ಕಾಸರಗೋಡು: ಕಾಸರಗೋಡು ನಗರಸಭಾ ಕಾರ್ಯದರ್ಶಿ ಪಿ.ಎ. ಜಸ್ಟಿನ್‌ರ ಮೇಲೆ ಕಳೆದ ಡಿಸೆಂಬರ್ 9ರಂದು ನಗರಸಭಾ ಕಚೇರಿಯಲ್ಲಿ ಹಲ್ಲೆ ನಡೆಸಿದ ಪ್ರಕರಣದ ಇನ್ನೋರ್ವ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ತಳಂಗರೆ ಪಡಿಞ್ಞಾರ್ ಯಾಸಿನ್ ಮಂಜಿಲ್‌ನ ಯಾಸಿನ್ ಅಬ್ದುಲ್ಲ (37) ಬಂಧಿತ ಆರೋಪಿ. ಇದೇ ಪ್ರಕರಣಕ್ಕೆ ಸಂಬಂ ಧಿಸಿ ಓರ್ವನನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಈಗ ಬಂಧಿತನಾದ ಆರೋಪಿಯ ವಿರುದ್ಧ ಬೇರೆ ಕೇಸುಗಳಿವೆ ಯೆಂದು ಪೊಲೀಸರು ತಿಳಿಸಿದ್ದಾರೆ.