ನಗರಸಭೆಯ ಸಮಗ್ರ ಯೋಜನೆ: ವರದಿ ಸಲ್ಲಿಕೆ

ಕಾಸರಗೋಡು: ನಗರಸಭೆಯ ಸಮಗ್ರ ನಗರ ಯೋಜನೆಯ ಪರಿಷ್ಕ ರಿಸಿದ ವರದಿ ಹಾಗೂ ಪ್ಲಾನ್‌ನ್ನು ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂರ ನೇತೃತ್ವದಲ್ಲಿ ಚೀಫ್ ಟೌನ್ ಪ್ಲಾನರ್‌ಗೆ ಹಸ್ತಂತರಿಸಲಾಯಿತು. ಖಾಲಿದ್ ಪಚ್ಚಕ್ಕಾಡ್, ಸಹೀರ್ ಆಸಿಫ್, ಕಾರ್ಯದರ್ಶಿ ಜಸ್ಟೀನ್ ಪಿ.ಎ, ಇಂಜಿನಿಯರ್ ದಿಲೀಶ್ ಎನ್.ಡಿ ಎಂಬಿವರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.

ಕಾಸರಗೋಡು ಹೊಸ ಬಸ್ ನಿಲ್ದಾಣ ಸೆಂಟ್ರಲ್ ಏರಿಯಾ ಎಂಬಿವುಗಳ ಸಮಗ್ರ ಅಭಿವೃದ್ಧಿ ನಿರ್ದೇಶಗಳನ್ನು ವರದಿಯಲ್ಲಿ ಅಡಕಗೊಳಿಸಲಾಗಿದೆ. ೩೦ ವರ್ಷದ ಬಳಿಕ ಕಾಸರಗೋಡು ನಗರಸಭೆಯ ಸಮಗ್ರ ನಗರಾ ಯೋಜನೆ ಪರಿಷ್ಕರಿಸುತ್ತಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page