ನಟ ಅಲ್ಲು ಅರ್ಜುನ್ ಮನೆಗೆ ದಾಳಿ: ಎಂಟು ಮಂದಿ ಕಸ್ಟಡಿಗೆ
ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್‌ರ ಮನೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪುಷ್ಪ ೨ರ ಬಿಡುಗಡೆ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಸಿಲುಕಿ ಓರ್ವೆ ಯುವತಿ ಸಾವಿಗೀಡಾಗಿದ್ದು, ಈ ಘಟನೆಗೆ ಸಂಬಂಧಿಸಿ ಆಕೆಯ ಕುಟುಂ ಬಕ್ಕೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗುತ್ತಾ ಹೈದರಾಬಾದ್‌ನಲ್ಲಿರುವ ನಟನ ಮನೆಗೆ ದಾಳಿ ನಡೆಸಿತ್ತು.
ಇದರಿಂದ ವ್ಯಾಪಕ ಹಾನಿ ಉಂಟಾಗಿತ್ತೆನ್ನಲಾ ಗಿದೆ. ಇತ್ತೀಚೆಗೆ ಹೈದರಾಬಾದ್‌ನ ಥಿಯೇಟರ್‌ವೊಂದರಲ್ಲಿ ಪುಷ್ಪಾ 2 ಬಿಡುಗಡೆ ವೇಳೆ ನಟ ಅಲ್ಲು ಅರ್ಜುನ್ ಅಲ್ಲಿಗೆ ತಲುಪಿದ್ದರು. ಇದರಿಂದ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ನೂಕು-ನುಗ್ಗಲು ಸೃಷ್ಟಿಯಾಗಿತ್ತು.