ನಟ ಗೋವಿಂದರಿಗೆ ಅಕಸ್ಮಾತ್ ತಗಲಿದ ಗುಂಡು: ಕಾಲಿಗೆ ಗಾಯ

ಮುಂಬಯಿ: ಬಾಲಿವುಡ್ ನಟ  ಗೋವಿಂದರಿಗೆ ಆಕಸ್ಮಿಕ ವಾಗಿ ಗುಂಡು ತಗಲಿ ಗಾಯಗೊಂ ಡಿದ್ದಾರೆ.  ಸ್ವಂತ ರಿವಾಲ್ವರ್‌ನಿಂದ ಹಾರಿದ ಗುಂಡು ಅವರ ಕಾಲಿಗೆ ತಾಗಿದೆ. ಮುಂಬಯಿಯ ಮನೆ ಯಲ್ಲಿ ರಿವಾಲ್ವರ್ ಶುಚಿಗೊಳಿಸು ತ್ತಿದ್ದಾಗ ಈ ಘಟನೆ ನಡೆದಿದೆ.  ಇಂದು ಮುಂಜಾನೆ 4.45ರ ವೇಳೆ  ಮನೆಯಿಂದ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಲೆಂದು ಮನೆಯಿಂದ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. 

ಗೋವಿಂದರನ್ನು ಮುಂಬಯಿಯ ಅಂಧೇರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಕಾಲಿನಿಂದ ಗುಂಡು ಹೊರತೆಗೆಯ ಲಾಗಿದೆ. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆಯೆಂದು ವರದಿಯಾಗಿದೆ. ರಿವಾಲ್ವರ್ ವಶಕ್ಕೆ ತೆಗೆದುಕೊಂಡ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

RELATED NEWS

You cannot copy contents of this page