ನಟ ದಿಲೀಪ್ ಶಂಕರ್ ಹೊಟೇಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ತಿರುವನಂತಪುರ: ಸಿನಿಮಾ ಕಿರುತೆರೆ ನಟ ದಿಲೀಪ್ ಶಂಕರ್ ಹೊಟೇಲ್‌ನ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ತಿರುವನಂತಪುರ ವಂಡೋಸ್ ಜಂಕ್ಷನ್‌ನ ಹೊಟೇಲ್ ಒಂದರಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಎರಡು ದಿನದ ಹಿಂದೆ ಮೃತಪಟ್ಟಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ‘ಚಾಪ್ಪಕುರೀಶ್’, ‘ನೋರ್ತ್ 28 ಕಾದಂ’ನಲ್ಲಿ ಅಭಿನಯಿಸಿದ್ದಾರೆ. ‘ಅಮ್ಮ ಅರಿಯಾದೆ’, ‘ಸುಂದರಿ’, ‘ಪಂಚಾಗ್ನಿ’ ಮೊದಲಾದ ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. ಆದರೆ ಮರಣಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.