ನಡುವಂಗಡಿ ಸಾರ್ವಜನಿಕ ಸ್ಮಶಾನಕ್ಕೆ ಹಾನಿ: ಸರಿಪಡಿಸಲು ಬಿಜೆಪಿ ಮನವಿ
ಬದಿಯಡ್ಕ: ಕುಂಬ್ಡಾಜೆ ಪಂಚಾ ಯತ್‌ನ ಮವ್ವಾರು ಸಮೀಪದ ನಡು ವಂಗಡಿಯಲ್ಲಿ ಸಾರ್ವಜನಿಕ ಸ್ಮಶಾನದ ಸುತ್ತು ಕೆಎಸ್‌ಟಿಪಿ ರಸ್ತೆ ಕಾಮಗಾರಿ ಗೋಸ್ಕರ ತಂದಿರಿಸಿದ ಜಲ್ಲಿಕಲ್ಲುಗಳನ್ನು ತೆರವುಗೊಳಿಸದಿರುವುದು ಸಮಸ್ಯೆ ಸೃಷ್ಟಿಸಿದೆ ಎಂದು ಸ್ಥಳೀಯರು ದೂರಿ ದ್ದಾರೆ. ಸ್ಮಶಾನದ ಆವರಣಗೋಡೆಗೂ ಹಾನಿಯುಂಟಾಗಿದ್ದು, ಈ ಬಗ್ಗೆ ದೂರು ನೀಡಿದರೂ ಸಂಬಂಧ ಪಟ್ಟವರು ಕ್ರಮ ಕೈಗೊಂಡಿಲ್ಲವೆಂದು ಬಿಜೆಪಿ ಬದಿಯಡ್ಕ ಮಂಡಲ ಕಾರ್ಯದರ್ಶಿ ಹರೀಶ್ ಗೋಸಾಡ ಆರೋಪಿಸಿದ್ದಾರೆ. ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕುಂಬ್ಡಾಜೆ ಪಂಚಾಯತ್ ಕಾರ್ಯ ದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಅವರು ದೂರು ನೀಡಿದ್ದಾರೆ. ಇದೇ ವೇಳೆ ಪಂಚಾಯತ್‌ನ ೧೨ನೇ ವಾರ್ಡ್ ಮಾವಿನಕಟ್ಟೆ ಬಳಿ ಮಸೀದಿಯ ಮುಂಭಾಗ ಬಳ್ಳಪದವು ರಸ್ತೆಗೆ ಹಾಕಿದ ಕಾಂಕ್ರೀಟ್ ಕಳಪೆಯಾಗಿದ್ದು, ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.