ನಡೆದು ಹೋಗುತ್ತಿದ್ದ ಪ್ಲಸ್ ಟು ವಿದ್ಯಾರ್ಥಿನಿಯ ದೌರ್ಜನ್ಯಕ್ಕೆ ಯತ್ನ : ಕುಂಬಳೆಯಲ್ಲಿ ವಾಸಿಸುತ್ತಿರುವ ಯುವಕ ಸೆರೆ
ಕಾಸರಗೋಡು: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಪ್ಲಸ್‌ಟು ವಿದ್ಯಾರ್ಥಿನಿಯಾದ 17ರ ಬಾಲಕಿಯನ್ನು ದೌರ್ಜನ್ಯಗೈಯ್ಯಲು ಯತ್ನವೆಂದು ದೂರಲಾಗಿದೆ. ಕಾಞಂಗಾಡ್‌ನ ಹೊಟೇಲ್ ನೌಕರ ಹಾಗೂ ಕುಂಬಳೆಯಲ್ಲಿ ವಾಸ ಮಾಡುತ್ತಿರುವ ಕಬೀರ್ (34) ನನ್ನು ಮೇಲ್ಪರಂಬ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಸಂತೋಷ್ ಕುಮಾರ್ ಬಂಧಿಸಿದ್ದಾರೆ. ಪೋಕ್ಸೋ ಪ್ರಕಾರ ಈತನ ವಿರುದ್ಧ ಕೇಸು ದಾಖಲಿ ಸಲಾಗಿದೆ.
ಇತ್ತೀಚೆಗೆ ಘಟನೆ ನಡೆದಿತ್ತು. ಬೈಕ್‌ನಲ್ಲಿ ಕಾಞಂಗಾಡ್‌ಗೆ ಆರೋಪಿ ತೆರಳುತ್ತಿದ್ದನು. ಮೇಲ್ಪ ರಂಬ ಠಾಣೆ ವ್ಯಾಪ್ತಿಯ ಸ್ಥಳವೊಂದಕ್ಕೆ ತಲುಪಿದಾಗ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯಲ್ಲಿ ಬೈಕ್‌ನಲ್ಲಿ ಕುಳಿತುಕೊಳ್ಳಲು ಆಗ್ರಹಿಸಿzನೆನ್ನಲಾಗಿದೆ. ಈತನ ವಿರುದ್ಧ ಬಸ್ ಪ್ರಯಾಣಿಕೆಯಾದ ಯುವತಿಯನ್ನು ಕೈಹಿಡಿದೆಳೆದ ಬಗ್ಗೆ ಬೇಡಗಂ ಠಾಣೆಯಲ್ಲೂ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.