ನರಹತ್ಯಾ ಯತ್ನ ಪ್ರಕರಣದ ಆರೋಪಿ ವಿಷ ಸೇವಿಸಿ ಸಾವು
ಕುಂಬಳೆ: ಬೈಕ್ ತಡೆದು ನಿಲ್ಲಿಸಿ ಖಾಸಗಿ ಬಸ್ ಚಾಲಕನಿಗೆ ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ಆರೋಪಿಯಾದ ಯುವಕ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವೇಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಬಂದ್ಯೋಡು ಅಡ್ಕ ವೀರನಗರದ ಗಣೇಶ್ ಎಂಬವರ ಪುತ್ರ ವಿಷ್ಣು (25) ಮೃತಪಟ್ಟ ವ್ಯಕ್ತಿ. 10 ದಿನಗಳ ಹಿಂದೆ ವಿಷ್ಣು ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದರಿಂದ ಆತನನ್ನು ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಆತ ನಿನ್ನೆ ಮೃತಪಟ್ಟಿದಾನ. ಒಂದು ವರ್ಷದ ಹಿಂದೆ ಬಂದ್ಯೋಡು -ಪೆರ್ಮುದೆ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕ ಅಬ್ದುಲ್ ರಶೀದ್ ಯಾನೆ ಅಚ್ಚು (34) ಎಂಬವರನ್ನು ಬೈಕ್ ತಡೆದು ನಿಲ್ಲಿಸಿ ಕಯ್ಯಾರು ಗ್ರಾಮ ಕಚೇರಿ ಸಮೀಪ ಇರಿದು ಗಾಯಗೊಳಿಸಲಾಯಿತೆಂಬ ಪ್ರಕರಣದಲ್ಲಿ ವಿಷ್ಣು ಆರೋಪಿ ಯಾಗಿದ್ದನು. ಕುಂಬಳೆ ಪೊಲೀಸರು ದಾಖಲಿಸಿಕೊಂಡ ನರಹತ್ಯಾ ಪ್ರಕರ ಣದಲ್ಲಿ ವಿಷ್ಣು ಹೊರತು ಪಂಜ ತ್ತೊಟ್ಟಿಯ ಚಂದ್ರನ್, ಕಯ್ಯಾರಿನ ಚಂದು ಎಂಬಿವರು ಆರೋಪಿಗಳಾಗಿ ದ್ದಾರೆ. ವಿಷ್ಣುವಿನ ಸಾವಿಗೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಮೃತನ ತಂದೆ, ತಾಯಿ ರಾಜೇಶ್ವರಿ, ಪತ್ನಿ ದಾಕ್ಷಾಯಿನಿ, ಮಕ್ಕಳಾದ ಧನ್ವಿತಾ, ಧನ್ವಿತ್, ಸಹೋದರ ರಜಿನ್ ಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನ.