ನರ್ಸ್ ನಿಮಿಷಪ್ರಿಯಳ ಗಲ್ಲು ಶಿಕ್ಷೆ ಯಮನ್ ಅಧ್ಯಕ್ಷ ಒಪ್ಪಿಕೊಂಡಿಲ್ಲವೆಂದು ಎಂಬಸಿ: ಹೂತಿ ನಿಲುವು ನಿರ್ಣಾಯಕ
ದೆಹಲಿ: ಯಮನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿ ದಿನ ಕಳೆಯುತ್ತಿರುವ ಪಾಲಕ್ಕಾಡ್ ನಿವಾಸಿಯಾದ ನರ್ಸ್ ನಿಮಿಷಪ್ರಿಯಾಳ ಗಲ್ಲುಶಿಕ್ಷೆಯನ್ನು ಯಮನ್ ಅಧ್ಯಕ್ಷ ಒಪ್ಪಿಕೊಂಡಿಲ್ಲವೆಂದು ಎಂಬಸಿ ತಿಳಿಸಿದೆ. ಗಲ್ಲುಶಿಕ್ಷೆ ಯಮನ್ ಅಧ್ಯಕ್ಷ ರಾಶಿದ್ ಅಲ್ ಅಲಿಮಿ ಅಂಗೀಕರಿಸಿಲ್ಲ ವೆಂದು ದೆಹಲಿಯ ಯಮನ್ ಎಂಬಸಿ ಸ್ಪಷ್ಟಪಡಿಸಿದೆ. ನಿಮಿಷಪ್ರಿಯಳ ಪ್ರಕರಣ ಸಂಭವಿಸಿರುವುದು ಹೂತಿ ನಿಯಂತ್ರಣ ದಲ್ಲಿರುವ ವಲಯದಲ್ಲಾಗಿದೆ.
ಈ ಪ್ರಕರಣವನ್ನು ಕೈಗೆತ್ತಿಕೊಂಡಿರು ವುದು ಕೂಡಾ ಹೂತಿಗಳಾಗಿದ್ದಾರೆ. ಹೂತಿಯ ಸುಪ್ರಿಂ ಪೊಲಿಟಿಕಲ್ ಕೌನ್ಸಿಲ್ ಮುಖಂಡ ನಿಹ್‌ದಿ ಹಲ್ ಮಶಾದ್ ಗಲ್ಲು ಶಿಕ್ಷೆಯನ್ನು ಅಂಗೀ ಕರಿಸಿರುವುದು. ಇವರನ್ನು ಭಿನ್ನಮತೀಯ ಅಧ್ಯಕ್ಷ ಎಂದು ಕರೆಯಲಾಗುತ್ತಿದೆ. ಈ ಆದೇಶವನ್ನು ಯಮನ್ ಪ್ರಸಿಡೆನ್ಶಿ ಯಲ್ ಲೀಡರ್‌ಶಿಪ್ ಕೌನ್ಸಿಲ್‌ನ ಅಧ್ಯಕ್ಷನಾದ ಡಾ. ರಾಶಿದ್ ಅಲಿಮಿ ಅಂಗೀಕರಿಸಿಲ್ಲವೆಂದು ಎಂಬಸಿ ಮಾಹಿತಿ ನೀಡಿದೆ. ಸಾರಿಗೆ ಸಚಿವ ಹಾಗೂ ಯಮನ್ ಅಧ್ಯಕ್ಷ ಗಲ್ಲುಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ಧಿಯ ಹಿನ್ನೆಲೆಯಲ್ಲಿ ಈ ವಿವರಣೆ ನೀಡಲಾಗಿದೆ. ಯಮನ್‌ನ ರಾಜಧಾನಿ ಯಾದ ಸನದಲ್ಲಿರುವ ಜೈಲಿನಲ್ಲಿದ್ದಾಳೆ ನಿಮಿಷಪ್ರಿಯ. ಸನ ಹೂತಿ ಭಿನ್ನಮತೀಯರ ನಿಯಂತ್ರಣದಲ್ಲಿರುವ ಸ್ಥಳವಾಗಿದೆ. ಯಮನ್ ಸರಕಾರಕ್ಕೆ ಗಲ್ಲುಶಿಕ್ಷೆಯಲ್ಲಿ ಪಾಲಿಲ್ಲವೆಂದು ಘೋಷಿಸಿದ ಹಿನ್ನೆಲೆಯಲ್ಲಿ ಹೂತಿ ಭಿನ್ನಮತೀಯರ ನಿಲುವು ಇನ್ನು ಏನಿದೆ ಎಂಬ ಬಗ್ಗೆ ನೋಡಲಾಗುತ್ತಿದೆ.
೨೦೧೭ರಲ್ಲಿ ಯಮನ್ ಪ್ರಜೆಯಾದ ತಲಾಲ್ ಅಬ್ದು ಮಹಿದಿ ಕೊಲೆಗೀಡಾಗಿದ್ದರು. ಆ ಬಳಿಕ ಅಬ್ದು ಮಹಿದಿಯ ಕುಟುಂಬವನ್ನು ಭೇಟಿಯಾಗಿ ನಿಮಿಷಪ್ರಿಯಳ ಕುಟುಂಬ ಜೈಲುವಾಸ ಕೊನೆಗೊಳಿಸಲು ಪ್ರಯತ್ನಿಸಿತ್ತು. ಆದರೆ ಅದು ಫಲ ಬೀರಿರಲಿಲ್ಲ.